ಚಿಕ್ಕಮಗಳೂರು: ಕಾಡುಕೋಣಗಳನ್ನು ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಸಜ್ಜಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಕೊಪ್ಪ ವಿಭಾಗದಲ್ಲಿ ಈ ಕಾರ್ಯಾಚರಣೆ ಪ್ರಾಯೋಗಿಕವಾಗಿ ಗುರುವಾರದಿಂದ ಆರಂಭವಾಗಲಿದೆ.

ಜಿಲ್ಲೆಯಲ್ಲಿ ಕಾಡಾನೆ ಜತೆಗೆ ಕಾಡುಕೋಣ ಮತ್ತು ಮಾನವ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಮೂರು ವರ್ಷಗಳ ಅವಧಿಯಲ್ಲಿ ಆರು ಜನ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ.

ಕಾಡುಕೋಣಗಳ ಹಾವಳಿ ತಡೆಯಲು ಇರುವ ಸಾಧ್ಯತೆಗಳ ಬಗ್ಗೆ ಆಲೋಚನೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಳೆದ ವರ್ಷ ಮಧ್ಯಪ್ರದೇಶಕ್ಕೆ ಹೋಗಿ ಅಧ್ಯಯನ ಮಾಡಿಕೊಂಡು ಬಂದಿತ್ತು. ಮಧ್ಯ ಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಾಡುಕೋಣಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈ ಮಾದರಿ ಅಳವಡಿಸಿಕೊಳ್ಳಲು ಸಾಧ್ಯವೇ ಎಂಬುದರ ಕುರಿತು ಅಧಿಕಾರಿಗಳು ಅಧ್ಯಯನ ನಡೆಸಿದ್ದರು.

ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣಗಳ ಸಂತತಿ ಕಡಿಮೆಯಾಗಿತ್ತು. 1998ರಲ್ಲಿ ಕೊನೆಯ ಕಾಡುಕೋಣವೂ ಮೃತಪಟ್ಟಿತ್ತು. ಬಾಂಧವಗಢದಿಂದ 250 ಕಿಲೋ ಮೀಟರ್ ದೂರದಲ್ಲಿರುವ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ ಕಾಡುಕೋಣಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. 2011ರಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈಗ 170ಕ್ಕೂ ಹೆಚ್ಚು ಕಾಡುಕೋಣಗಳು ಬಾಂಧವಗಡ ರಾಷ್ಟ್ರೀಯ ಉದ್ಯಾನದಲ್ಲಿವೆ.

ಜಿಲ್ಲೆಯ ಕೊಪ್ಪ ವಿಭಾಗದಲ್ಲಿ ಜನವಸತಿ ಪ್ರದೇಶಕ್ಕೆ ಬಂದು ಮನುಷ್ಯರ ಮೇಲೆ ದಾಳಿ ನಡೆಸುವ ಕಾಡುಕೋಣಗಳನ್ನು ಹಿಡಿದು ಕಾಡಿಗೆ ಬಿಡಲು ಈ ವಿಧಾನವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಅನುಸರಿಸಲಾಗುತ್ತಿದೆ. ಯಾವ ಅರಣ್ಯಕ್ಕೆ ಬಿಡಬೇಕು ಎಂಬುದು ಇನ್ನೂ ಸ್ಪಷ್ಟತೆ ಇಲ್ಲ. ಸೆರೆ ಹಿಡಿದ ಬಳಿಕ ಪಿಸಿಸಿಎಫ್ ನಿರ್ಧರಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಇದಕ್ಕೆ ಬೇಕಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್ಒಪಿ) ತಜ್ಞರ ತಂಡ ತಯಾರಿಸಿದೆ. ವೈದ್ಯರು, ವಾಹನ, ಅಗತ್ಯ ಪರಿಕರ ಸೇರಿ ಪ್ರತ್ಯೇಕ ತಂಡ ರಚಿಸಲಾಗಿದೆ. ಬುಧವಾರ ಈ ತಂಡಗಳು ಅಭ್ಯಾಸ ನಡೆಸಲಿವೆ. ಕಾಡುಕೋಣ ಸೆರೆ ಹಿಡಿಯಲು ಬಳಕೆ ಮಾಡಬೇಕಿರುವ ಅರಿವಳಿಕೆ ಚುಚ್ಚುಮದ್ದು ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿಗಳ ತಂಡ ಅಂದಾಜು ಮಾಡಿದೆ.

‘ಹಲವು ವರ್ಷಗಳ ಹಿಂದೆ ಮೈಸೂರು ಮೃಗಾಲಯದಿಂದ ಬನ್ನೇರುಘಟ್ಟಕ್ಕೆ ಕಾಡುಕೋಣವನ್ನು ಸ್ಥಳಾಂತರ ಮಾಡಲಾಗಿದೆ. ಅದು ಮೃಗಾಲಯದಲ್ಲಿ ಇದ್ದಿದ್ದರಿಂದ ಅಷ್ಟೇನು ಕಷ್ಟವಾಗಿಲ್ಲ. ಅರಣ್ಯದಲ್ಲಿ ಇರುವ ಕಾಡುಕೋಣವನ್ನು ಹಿಡಿದು ಸ್ಥಳಾಂತರ ಮಾಡುವ ಪ್ರಯತ್ನ ಇದೇ ಮೊದಲು’ ಎಂದು ಅಧಿಕಾರಿಗಳು ಹೇಳುತ್ತಾರೆ.

ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಪಶುವೈದ್ಯರ ತಂಡ ಈಗಾಗಲೇ ಕೊಪ್ಪದಲ್ಲಿ ಮೊಕ್ಕಾಂ ಹೂಡಿದೆ. ಸಾಕಾನೆಗಳು ಬುಧವಾರ ಬರಲಿವೆ, ತರಬೇತಿ ಪಡೆದಿರುವ ಸಿಬ್ಬಂದಿ ಕೂಡ ಕೊಪ್ಪದಲ್ಲಿದ್ದಾರೆ. ಬುಧವಾರ ಅಭ್ಯಾಸ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-126-1652333487

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.