ಚಿಕ್ಕಮಗಳೂರು: ಆನೆಗಳ ರೀತಿ ಕಾಡುಕೋಣಗಳನ್ನು ಹಿಡಿದು ಸ್ಥಳಾಂತರ ಮಾಡುವ ಯೋಜನೆ ವರ್ಷದಿಂದ ನನೆಗುದಿಗೆ ಬಿದ್ದಿದೆ. ಅಧಿಕಾರಿಗಳು ಮಧ್ಯಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿದ್ದಾರೆ. ಸರ್ಕಾರದ ಅನುಮೋದನೆ ದೊರಕದ ಕಾರಣ ಯೋಜನೆ ಕಡತದಲ್ಲೇ ಉಳಿದಿದೆ.

ಜಿಲ್ಲೆಯಲ್ಲಿ ಕಾಡಾನೆ ಜತೆಗೆ ಕಾಡುಕೋಣ ಮತ್ತು ಮಾನವ ಸಂಘರ್ಷವೇ ಹೆಚ್ಚಾಗುತ್ತಿದೆ. ಮೂರು ವರ್ಷಗಳ ಅವಧಿಯಲ್ಲಿ 6 ಜನ ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಕಳಸ, ಕೊಪ್ಪ, ಮೂಡಿಗೆರೆ, ಶೃಂಗೇರಿ ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚು ಇದೆ.

ಮಧ್ಯಪ್ರದೇಶದ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ ಬಾಂಧವಗಡ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಾಡುಕೋಣಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈ ಮಾದರಿ ಅಳವಡಿಸಿಕೊಳ್ಳಲು ಸಾಧ್ಯವೇ ಎಂಬುದರ ಕುರಿತು ಅಧಿಕಾರಿಗಳು ಅಧ್ಯಯನ ನಡೆಸಿದ್ದರು.

ಬಾಂಧವಗಡ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣಗಳ ಸಂತತಿ ಕಡಿಮೆಯಾಗಿತ್ತು. 1998ರಲ್ಲಿ ಕೊನೆಯ ಕಾಡುಕೋಣವೂ ಮೃತಪಟ್ಟಿತ್ತು. ಬಾಂಧವಗಡದಿಂದ 250 ಕಿಲೋ ಮೀಟರ್ ದೂರದಲ್ಲಿರುವ ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಿಂದ ಕಾಡುಕೋಣಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. 2011ರಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈಗ 170ಕ್ಕೂ ಹೆಚ್ಚು ಕಾಡುಕೋಣಗಳು ಬಾಂಧವಗಡ ರಾಷ್ಟ್ರೀಯ ಉದ್ಯಾನದಲ್ಲಿವೆ ಎಂದು ಅಧ್ಯಯನಕ್ಕೆ ತೆರಳಿದ್ದ ಅಧಿಕಾರಿಗಳು ಹೇಳುತ್ತಾರೆ.

ಕರ್ನಾಟಕದಲ್ಲಿ ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗುತ್ತಿದೆ. ಹಾವಳಿ ಮಾಡುವ ಹುಲಿ ಮತ್ತು ಚಿರತೆಗಳನ್ನೂ ಸ್ಥಳಾಂತರ ಮಾಡಲಾಗಿದೆ. ಕಾಡುಕೋಣಗಳ ಸ್ಥಳಾಂತರ ಈವರೆಗೆ ಆಗಿಲ್ಲ. ಯೋಜನೆಗೆ ಅನುದಾನ ಸಹಿತ ಅನುಮೋದನೆ ದೊರಕಿದರೆ ಮಾರ್ಗದರ್ಶಿ ಸೂತ್ರ (ಎಸ್ಒಪಿ) ತಜ್ಞರ ತಂಡ ತಯಾರಿಸಲಿದೆ. ಸಿಬ್ಬಂದಿಗೆ ತರಬೇತಿಯನ್ನೂ ನೀಡಬೇಕಾಗುತ್ತದೆ.

‘ಕಳೆದ ವರ್ಷ ಕಾಡುಕೋಣ–ಮಾನವ ಸಂಘರ್ಷ ಹೆಚ್ಚಾದಾಗ ಸ್ಥಳಾಂತರ ಯೋಜನೆ ಬಗ್ಗೆ ಸರ್ಕಾರ ಆಲೋಚನೆ ನಡೆಸಿತ್ತು. ಶನಿವಾರ ಕಾರ್ಮಿಕ ರೊಬ್ಬರ ಜೀವ ಹೋಗಿದೆ. ಕಾಡುಕೋಣ ಸ್ಥಳಾಂತರ ಮಾಡುವ ಕೆಲಸ ಕೂಡಲೇ ಆರಂಭಿಸಬೇಕು’ ಎಂಬುದು ಸ್ಥಳೀಯರ ಒತ್ತಾಯ.

ಸ್ಥಳಾಂತರ ಹೇಗೆ

ಜನವಸತಿ ಪ್ರದೇಶದಲ್ಲಿ ಓಡಾಟುವ ಕಾಡುಕೋಣಗಳನ್ನು ಗುರುತಿಸಿ ಅವುಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸ್ಥಳಾಂತರ ಮಾಡಬೇಕಾಗುತ್ತದೆ.

ವಿಶೇಷವಾಗಿ ವಿನ್ಯಾಸ ಮಾಡಿರುವ ಟ್ರಕ್ಗಳಲ್ಲಿ ಸಾಗಿಸಬೇಕು. ಸೆರೆ ಹಿಡಿದ ಕಾಡುಕೋಣಗಳನ್ನು ಮತ್ತೊಂದು ಕಾಡಿಗೆ ನೇರವಾಗಿ ಬಿಡುವಂತಿಲ್ಲ. ಆ ವಾತಾವರಣಕ್ಕೆ ಹೊಂದಿಸಲು ನಿರ್ದಿಷ್ಟ ಜಾಗದಲ್ಲಿ ಕೆಲ ದಿನಗಳ ಕಾಲ ಇರಿಸಬೇಕು. ವಾತವರಣಕ್ಕೆ ಹೊಂದಿಕೊಂಡ ಬಳಿಕವೇ ಬಿಡುಗಡೆ ಮಾಡಬೇಕು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾಡುಕೋಣಗಳನ್ನು ಹಿಡಿದು ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳು ಮಧ್ಯಪ್ರದೇಶಕ್ಕೆ ಹೋಗಿ ಅಧ್ಯಯನ ನಡೆಸಿ ಬಂದಿದ್ದಾರೆ. ಈ ಯೋಜನೆ ಇನ್ನೂ ಚರ್ಚೆ ಹಂತದಲ್ಲಿದ್ದು, ಶೀಘ್ರವೇ ಈ ಬಗ್ಗೆ ಕ್ರಮ ವಹಿಸಲಾಗುವುದು
– ಈಶ್ವರ ಬಿ.ಖಂಡ್ರೆ, ಅರಣ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.