ಚಿಕ್ಕಮಗಳೂರು: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ಕಾಯ್ದೆ ಜಾರಿ ಮಾಡಿ ಕಾರ್ಮಿಕರ ಹಕ್ಕು ಕಸಿದುಕೊಳ್ಳುತ್ತಿದೆ. ಕಾರ್ಮಿಕರು ಎಚ್ಚೆತ್ತು ಹೋರಾಟ ರೂಪಿಸಿ ತಮ್ಮ ಶ್ರಮದ ಫಲ ಪಡೆಯಬೇಕು ಎಂದು ಎಂದು ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ ಹೇಳಿದರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಎಐಟಿಯುಸಿ ವತಿಯಿಂದ ಗುರುವಾರ ನಡೆದ ‘ವಿಶ್ವ ಕಾರ್ಮಿಕರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಎಂದಿಗೂ ಕಾರ್ಮಿಕರ ಪರವಾಗಿ ಇಲ್ಲ. ಉದ್ಯಮಿಗಳ ಸಾಲ ಮನ್ನಾ ಮಾಡಿ, ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ನಿಂತಿರುವ ಸರ್ಕಾರ. ಎಐಟಿಯುಸಿ ಕೆಂಬಾವುಟ ಕೇವಲ ಬಟ್ಟೆಯಲ್ಲ. ಅನೇಕ ಕಾರ್ಮಿಕರು ತ್ಯಾಗ, ಬಲಿದಾನದ ಸಂಕೇತ. ಸರ್ಕಾರಿ ಅಧಿಕಾರಿಗಳಿಗೆ ದಿನದ ಎಂಟು ಗಂಟೆ ಕರ್ತವ್ಯವಾದರೆ, ದುಡಿಯುವ ವರ್ಗ ಮಾತ್ರ 12 ಗಂಟೆಗಳ ಕಾರ್ಯನಿರ್ವಹಿಸುವುದು ಸರಿಯೇ’ ಎಂದು ಪ್ರಶ್ನಿಸಿದರು.

ಕನಿಷ್ಠ ವೇತನಕ್ಕಾಗಿ ಎಐಟಿಯುಸಿ ದೇಶದಲ್ಲಿ ಅನೇಕ ಹೋರಾಟ ಮಾಡಿದೆ. ಅನೇಕರು ಜೈಲಿಗೆ ಹೋಗಿದ್ದಾರೆ. ಅಂತಹ ದೊಡ್ಡ ಇತಿಹಾಸ ಹೊಂದಿರುವುದು ಎಐಟಿಯುಸಿ. ಈ ಜಿಲ್ಲೆಯಲ್ಲಿ ಬಿ.ಕೆ ಸುಂದ್ರೇಶ್ ಅವರು ಕಾರ್ಮಿಕರ ಹೋರಾಟಕ್ಕಾಗಿ ತಮ್ಮ ಪ್ರಾಣವನ್ನೇ ಕೊಟ್ಟಿದ್ದಾರೆ ಎಂದು ಹೇಳಿದರು.

ಸಿಪಿಐ ಮುಖಂಡರಾದ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ‘ಜಿಲ್ಲೆ ಸೇರಿ ಹಲವೆಡೆ ಕಾರ್ಮಿಕರಿಗೆ ನಿವೇಶನ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಎರಡು ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಸಿಕೊಂಡು ಕಾರ್ಮಿಕರನ್ನು ಮೂಲೆಗುಂಪು ಮಾಡುತ್ತಿವೆ. ರಕ್ತವನ್ನೇ ಬೆವರಿನಂತೆ ಸುರಿಸುತ್ತಿರುವ ಕಾರ್ಮಿಕರು ದೇಶದ ಜನಪ್ರತಿನಿಧಿ ಆಗುವುದು ಸಿಪಿಐನ ಮೂಲ ಉದ್ದೇಶ’ ಎಂದು ತಿಳಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ರಘು ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಾತಿ, ಧರ್ಮ ರಹಿತವಾಗಿ ಎಲ್ಲರನ್ನು ಒಂದುಗೂಡಿಸಿ ಆಚರಿಸುವ ಹಬ್ಬವೇ ಕಾರ್ಮಿಕರ ದಿನ’ ಎಂದು ತಿಳಿಸಿದರು.

ಎಐಟಿಯುಸಿ ಸದಸ್ಯ ಎಸ್.ವಿಜಯಕುಮಾರ್, ‘ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ಕಾರ್ಮಿಕರ ಮೂಲ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ. ಇದರ ವಿರುದ್ಧ ಗಟ್ಟಿಧ್ವನಿಯಿಂದ ಹೋರಾಡಬೇಕಿದೆ’ ಎಂದರು.

ಸಿಪಿಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ವಿ.ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಜಯಕುಮಾರ್, ಪ್ಲಾಂಟೇಷನ್ ಯೂನಿಯುನ್ ಜಿಲ್ಲಾ ಕಾರ್ಯದರ್ಶಿ ಜಿ.ರಮೇಶ್, ಕಟ್ಟಡ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ಸಿ. ವಸಂತಕುಮಾರ್, ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ಮುಖಂಡರಾದ ಹೆಡದಾಳ್ ಕುಮಾರ್, ಎಚ್.ಕೆ. ಸೋಮೇಗೌಡ, ಮಂಜೇಗೌಡ, ರಮೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಸಿಪಿಐ ಕಚೇರಿಯಿಂದ ಆಜಾದ್ಪಾರ್ಕ್ ತನಕ ಕಾರ್ಮಿಕರು ಮೆರವಣಿಗೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-126-2006721659

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.