ಚಿಕ್ಕಮಗಳೂರು: ಯಗಚಿ ಜಲಾಶಯದಿಂದ ಚಿಕ್ಕಮಗಳೂರು ನಗರಕ್ಕೆ ಬರುತ್ತಿರುವ ನೀರಿನ ಸಾಮರ್ಥ್ಯ ಹೆಚ್ಚಿಸುವ ಯೋಜನೆ ಮತ್ತೊಮ್ಮೆ ನನೆಗುದಿಗೆ ಬಿದ್ದಿದೆ. ₹122.52 ಕೋಟಿ ಮೊತ್ತದ ಯೋಜನೆಗೆ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿಲ್ಲ.

ನಗರ ಬೆಳೆಯುತ್ತಿದ್ದು, ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಇಂದಾವರ ಬಳಿ ಹೊಸ ಲೇಔಟ್ ನಿರ್ಮಿಸಲಾಗುತ್ತಿದೆ. ಇದಲ್ಲದೇ ನಗರದ ಸುತ್ತಮುತ್ತ ಲೇಔಟ್ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ. ನಗರದಲ್ಲೂ ಮನೆಗಳ ನಿರ್ಮಾಣ ಹೆಚ್ಚಾಗುತ್ತಿದೆ. 2056ರ ವೇಳೆಗೆ ನಗರದ ಜನಸಂಖ್ಯೆ 2.22 ಲಕ್ಷಕ್ಕೆ ಏರಿಕೆಯಾಗುವ ಅಂದಾಜು ಮಾಡಲಾಗಿದೆ.

ಯಗಚಿ ಜಲಾಶಯದಿಂದ ಸದ್ಯ 27 ದಶಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದ್ದು, ಮುಂದಿನ 30 ವರ್ಷಗಳಲ್ಲಿ ಹೆಚ್ಚಾಗಲಿರುವ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಸಾಮರ್ಥ್ಯವನ್ನು 51 ದಶಲಕ್ಷ ಲೀಟರ್ಗೆ ಹೆಚ್ಚಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಯೋಜನೆ ರೂಪಿಸಿದೆ. ₹128 ಕೋಟಿ ಅಂದಾಜು ಮೊತ್ತದ ಯೋಜನೆಯನ್ನು ಮಂಡಳಿ ರೂಪಿಸಿತ್ತು. ಅದನ್ನು ಪರಿಷ್ಕರಿಸಿರುವ ನಗರಾಭಿವೃದ್ಧಿ ಇಲಾಖೆ ₹122.52 ಕೋಟಿಗೆ ಸೀಮಿತ ಮಾಡಿದೆ.

ಹಾಸನ ಜಿಲ್ಲೆಯ ಬೇಲೂರಿನ ಯಗಚಿ ಜಲಾಶಯದಲ್ಲಿ 12/9 ಮೀಟರ್ ಅಳತೆಯ ಹೊಸ ಜಾಕ್ವೆಲ್ ಹಾಗೂ ಪಂಪ್ಹೌಸ್ ನಿರ್ಮಾಣ, ಜಾಕ್ವೆಲ್ನಲ್ಲಿ 330 ಎಚ್ಪಿ ಸಾಮರ್ಥ್ಯದ 2 ಪಂಪ್ಸೆಟ್ಗಳ ಅಳವಡಿಕೆ, ಜಾಕ್ವೆಲ್ನಿಂದ ಮಧ್ಯಂತರ ಯಂತ್ರ ಸ್ಥಾವರದ ತನಕ 16.6 ಕಿಲೋ ಮೀಟರ್ ಉದ್ದದ ಕೊಳವೆ ಮಾರ್ಗ ಅಳವಡಿಕೆ ಮಾಡುವುದು ಯೋಜನೆಯ ಉದ್ದೇಶ.

ಮಧ್ಯಂತರ ಯಂತ್ರ ಸ್ಥಾವರದಲ್ಲಿ 440 ಎಚ್.ಪಿ ಸಾಮರ್ಥ್ಯದ ಎರಡು ಪಂಪ್ಸೆಟ್ ಅಳವಡಿಕೆ, ಮಧ್ಯಂತರ ಜಲಶುದ್ಧೀಕರಣ ಘಟಕದ ತನಕ 9.2 ಕಿಲೋ ಮೀಟರ್ ಉದ್ದದ ಕೊಳವೆ ಮಾರ್ಗ, ಹೊಸದಾಗಿ 15 ಎಂಎಲ್ಡಿ ಸಾಮರ್ಥ್ಯದ ರ್ಯಾಪಿಡ್ ಸ್ಯಾಂಡ್ ಫಿಲ್ಟರ್ ಜಲಶುದ್ಧೀಕರಣ ಘಟಕದ ನಿರ್ಮಾಣ ಮಾಡುವುದು ಯೋಜನೆಯ ಕಾಮಗಾರಿಗಳ ಪಟ್ಟಿಯಲ್ಲಿದೆ.

ಇದಲ್ಲದೆ ಮೂರು ಹೊಸ ಜಲ ಸಂಗ್ರಹಾಗಾರ, ಫೀಡರ್ ಕೊಳವೆ ಹಾಗೂ ವಿತರಣಾ ಕೊಳವೆ ಸಾಲು ವ್ಯವಸ್ಥೆಯ ಸುಧಾರಣಾ ಕಾಮಗಾರಿಗಳು ಕೂಡ ಸಮಗ್ರ ಯೋಜನಾ ವರದಿಯಲ್ಲಿ ಇವೆ. ಕುಪ್ಪೆನಹಳ್ಳಿ, ಚಂದ್ರಕಟ್ಟೆ ಹಾಗೂ ಹಳೇ ಉಪ್ಪಳ್ಳಿಯಲ್ಲಿ ವಿತರಣಾ ಪೈಪ್ಲೈನ್ ಅಳವಡಿಕೆ ಮಾಡಲು ಉದ್ದೇಶಿಸಲಾಗಿದೆ.

ಆರ್ಥಿಕ ಇಲಾಖೆಯ ಅನುಮೋದನೆಗೆ ಕಾದಿರುವ ಯೋಜನೆ ಈ ಯೋಜನೆ ಸದ್ಯ ಆರ್ಥಿಕ ಇಲಾಖೆಯ ಅನುಮೋದನೆಗೆ ಕಾದಿದೆ. ಈ ಯೋಜನೆಯ ಸ್ಥಿತಿಗತಿ ಬಗ್ಗೆ ಶಾಸಕ ಎಚ್.ಡಿ. ತಮ್ಮಯ್ಯ ಅವರು ವಿಧಾನಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದಾರೆ. ಯೋಜನೆ ಈಗ ಯಾವ ಹಂತದಲ್ಲಿದೆ ಕಾಮಗಾರಿ ಯಾವಾಗ ಆರಂಭವಾಗಲಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ನೀಡಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ‘ಯೋಜನೆಯ ಪ್ರಸ್ತಾವನೆ ಪರಿಶೀಲಿಸಿ ಅಂದಾಜು ಮೊತ್ತವನ್ನು ₹122.52 ಕೋಟಿಗೆ ಪರಿಷ್ಕರಿಸಲಾಗಿದೆ. ಆರ್ಥಿಕ ಇಲಾಖೆ 2025ರ ಜುಲೈನಲ್ಲಿ ನೀಡಿರುವ ಅಭಿಪ್ರಾಯದಂತೆ ಯೋಜನೆ ಮುಂದೂಡಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ತಿಳಿಸಲಾಗಿದೆ. ಯೋಜನೆಯ ಪ್ರಸ್ತಾವನೆ ಮರು ಪರಿಶೀಲಿಸಿ 2025ರ ನವೆಂಬರ್ನಲ್ಲಿ ಮತ್ತೊಮ್ಮೆ ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿತ್ತು. ಪ್ರಸ್ತಾವನೆಯನ್ನು ಸದ್ಯಕ್ಕೆ ಮುಂದೂಡುವಂತೆ ಮತ್ತೊಮ್ಮೆ ಆರ್ಥಿಕ ಇಲಾಖೆ ತಿಳಿಸಿದೆ’ ಎಂದು ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.