ಶುಕ್ರವಾರ, ನವೆಂಬರ್ 22, 2019
25 °C

ಭಾರಿ ಮಳೆ | ಮುರಿದು ಬಿದ್ದ ಸೇತುವೆ: ಕೂವೆ- ಮಾಳಿಂಗನಾಡು ರಸ್ತೆ ಸಂಪರ್ಕ ಕಡಿತ

Published:
Updated:
Prajavani

ಕಳಸ(ಚಿಕ್ಕಮಗಳೂರು ಜಿಲ್ಲೆ): ಭಾನುನಾರ ರಾತ್ರಿ ಸುರಿದ ಭಾರಿ ಮಳೆಗೆ ಮಾಳಿಂಗನಾಡು ಬಳಿ ಸೇತುವೆಯೊಂದು ಮುರಿದು ಬಿದ್ದಿದ್ದು, ಕೂವೆ-ಮಾಳಿಂಗನಾಡು ರಸ್ತೆ ಸಂಚಾರ ಕಡಿತಗೊಂಡಿದೆ.

ಈ ಪ್ರದೇಶದಲ್ಲಿ ರಾತ್ರಿ 8ರ ಸುಮಾರಿಗೆ ಒಂದು ಗಂಟೆಯ ಅವಧಿಯಲ್ಲಿ 3 ಇಂಚಿಗೂ ಹೆಚ್ಚು ಮಳೆ ಸುರಿದಿದೆ. ಈಗಾಗಲೇ ಶಿಥಿಲಗೊಂಡಿದ್ದ ಮಾಳಿಂಗನಾಡು ಸೇತುವೆಯ ಒಂದು ಬದಿ ಭೂಕುಸಿತವಾಗಿ ಸೇತುವೆ ಸಂಪೂರ್ಣವಾಗಿ ನೆಲಕ್ಕೆ ಕುಸಿದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರಾತ್ರಿ ಇದೇ ರಸ್ತೆಯಲ್ಲಿ ಬೈಕಿನಲ್ಲಿ ಮನೆಗೆ ಮರಳುತ್ತಿದ್ದ ರಾಮೇಗೌಡ ಅವರ ಮಗ ಪ್ರದೀಪ್ ಮುರಿದ ಸೇತುವೆಯ ಬಗ್ಗೆ ಮಾಹಿತಿ ಇಲ್ಲದೆ ಇದೇ ದಾರಿಯಲ್ಲಿ ಬಂದಿದ್ದಾರೆ.ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಂಡು ಬಂದ 10 ಅಡಿ ಆಳದ ಕಂದಕಕ್ಕೆ ಬೈಕ್ ಸಮೇತ ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)