ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ದೈವದ ಚಿತ್ರ: ಎಲ್ಲೆಂದರಲ್ಲಿ ಕಸ ಎಸೆಯುವುದದನ್ನು ತಡೆಯಲು ತಂತ್ರ

, ಆಪತ್ತಿನ ಎಚ್ಚರಿಕೆ ಭಿತ್ತಿಫಲಕ ಅಳವಡಿಕೆ
Last Updated 12 ಜನವರಿ 2022, 6:38 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ನಗರಸಭೆ ಹೊಸ ಪ್ರಯೋಗಕ್ಕೆ ಕೈಹಾಕಿದೆ. ‘ಇಲ್ಲಿ ಕಸ ಎಸೆದರೆ ನಿಮಗೆ ಆಪತ್ತು ಎದುರಾಗಲಿದೆ ಎಂಬ ಸಾಲುಗಳು, ದೈವದ ಚಿತ್ರ ಇರುವ’ ಭಿತ್ತಿಫಲಕಗಳನ್ನು ನಗರದ ವಿವಿಧೆಡೆ ಅಳವಡಿಸಲು ಮುಂದಾಗಿದೆ.

ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಗಳನ್ನು ಬಿಡುಗಡೆಗೊಳಿಸಲಾಯಿತು.

ಈ ಸ್ಥಳದಲ್ಲಿ ಕಸ ಹಾಕಿದರೆ ‘ನಿಮಗೆ ಕೆಟ್ಟ ಘಳಿಗೆ ಪ್ರಾರಂಭವಾಗುತ್ತದೆ’, ‘ನೀವು ಅಂಗವಿಕಲರಾಗುತ್ತೀರಿ’,‘ರಾತ್ರಿ ಕನಸಲ್ಲಿ ಭೂತವಾಗಿ ಕಾಡುತ್ತೇನೆ’ ಎಂಬ ಸಾಲುಗಳು ಭಿತ್ತಿಪತ್ರಗಳಲ್ಲಿವೆ. ಸಾಲುಗಳ ಮೇಲೆ ದೇವರ ಚಿತ್ರಗಳು ಇವೆ.

ನಗರಸಭೆ ಆಯುಕ್ತ ಬಿ.ಸಿ. ಬಸವರಾಜ್ ಕಾರ್ಯಕ್ರಮದಲ್ಲಿ ಮಾತನಾಡಿ, ‘ಎಲ್ಲ ವಾರ್ಡ್‌ಗಳಲ್ಲಿ ಪ್ರತಿನಿತ್ಯ ಆಟೋ ಟಿಪ್ಪರ್‌ಗಳಲ್ಲಿ ಮನೆಮನೆ ಕಸ ಸಂಗ್ರಹಿಸಲಾಗುತ್ತಿದೆ. ಆದರೂ ಕೆಲವರು ಕಸವನ್ನು ನಿವೇಶನ, ಚರಂಡಿಗೆ ಬಿಸಾಕುತ್ತಾರೆ. ನಗರದ ನೈರ್ಮಲ್ಯ ಹಾಳಾಗುತ್ತಿದೆ. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ, ಕಸ ಎಸೆಯದಂತೆ ಜನರಿಗೆ ಹೆದರಿಕೆ ಮೂಡಿಸಲು ಈ ಹೊಸ ಪ್ರಯೋಗಕ್ಕೆ ಮುಂದಾಗಿದ್ದೇವೆ’ ಎಂದು ತಿಳಿಸಿದರು.

‘ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಕಸದ ಗಾಡಿಗೆ ಹಾಕಬೇಕು ಎಂದು ಜಾಗೃತಿ ಮೂಡಿಸುವ ಪ್ರಯತ್ನ ಇದು’ ಎಂದು ಹೇಳಿದರು.

ನಗರದಲ್ಲಿ ಕಸ ಬಿಸಾಡು ವವರ ವಿರುದ್ಧ ಪ್ರಕರಣ ದಾಖಲಿಸಲಾ ಗುವುದು. ಅವರ ಮನೆಗಳ ವಿದ್ಯುತ್, ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರಸಭೆ ‘ಭೀತಿ’ ಅಸ್ತ್ರ: ಕಸ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ನಗರಸಭೆಯ ಹೊಸ ಪ್ರಯೋಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಜಾಲತಾಣದಲ್ಲಿ ಚರ್ಚೆ’: ವ್ಯಾಟ್ಸ್‌ ಅಪ್‌ ಗುಂಪುಗಳಲ್ಲಿ ಚರ್ಚೆಯಾಗುತ್ತಿದೆ. ಭಿತ್ತಿ ಪತ್ರದಲ್ಲಿ ದೇವರ ಚಿತ್ರ ಹಾಕಿದ್ದಕ್ಕೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಭಿತ್ತಿಫಲಕ ಅಳವಡಿಸುವ ಬದಲು ಆ ಜಾಗದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಎಂಬ ಸಲಹೆ ನೀಡಿದ್ದಾರೆ. ಒಟ್ಟಾರೆ ನಗರಸಭೆ ನಡೆ ಬಿಸಿಬಿಸಿ ಚರ್ಚೆಗೆ ಎಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT