ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ತುಪ್ಪವಾದ ಅರೇಬಿಕಾ ಕಾಫಿ

ಮಲೆನಾಡಿನಲ್ಲಿ ಮಳೆಯ ನಡುವೆ ಹಣ್ಣಾಗುತ್ತಿರುವ ಕಾಫಿ
Last Updated 10 ಆಗಸ್ಟ್ 2021, 21:14 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅರೇಬಿಕಾ ಕಾಫಿಯು ಹಣ್ಣಾಗತೊಡಗಿದ್ದು, ಮಳೆಯ ನಡುವೆ ಕಾಫಿ ಕೊಯ್ಲು ಮಾಡಲಾಗದೆ ಬೆಳೆಗಾರರು ಪರಿತಪಿಸುವಂತಾಗಿದೆ.

ಮಾರ್ಚ್ ಪ್ರಾರಂಭದಲ್ಲಿ ಸುರಿದ ಮಳೆಯಿಂದಾಗಿ ಅರೇಬಿಕಾ ಕಾಫಿಯು ಉತ್ತಮವಾಗಿ ಹೂವರಳಿ ಬಂಪರ್ ಬೆಳೆಯ ನಿರೀಕ್ಷೆ ಉಂಟಾಗಿತ್ತು. ಆದರೆ, ನವೆಂಬರ್ ಬಳಿಕ ಹಣ್ಣಾಗ
ಬೇಕಿದ್ದ ಕಾಫಿ ಫಸಲು ಅವಧಿಗೂ ಮುನ್ನವೇ ಹಣ್ಣಾಗ ತೊಡಗಿದ್ದು, ಸುರಿಯುತ್ತಿರುವ ಮಳೆಯ ನಡುವೆ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡಲಾಗದೆ ಬೆಳೆ ಗಾರರು ಕಂಗಾಲಾಗುವಂತೆ ಮಾಡಿದೆ.

ತಾಲ್ಲೂಕಿನಲ್ಲಿರುವ ಹಲವು ಕಾಫಿ ಕ್ಯೂರಿಂಗ್‌ಗಳಲ್ಲಿ ಹಣ್ಣಾಗಿರುವ ಕಾಫಿಯನ್ನು ನೇರವಾಗಿ ಕೊಂಡು ಕೊಳ್ಳುವ ವ್ಯವಸ್ಥೆ ಇದೆಯಾದರೂ, ಕಾಫಿ ಗಿಡಗಳಲ್ಲಿ ಸಂಪೂರ್ಣವಾಗಿ ಹಣ್ಣಾಗದೇ ಅರ್ಧದಷ್ಟು ಹಣ್ಣಾಗಿರುವುದರಿಂದ ಕಾಯಿಯ ನಡುವೆ ಹಣ್ಣನ್ನು ಬೇರ್ಪಡಿಸುವುದು ಕಷ್ಟ. ಬೇರ್ಪಡಿಸಿದರೂ ಹಣ್ಣಿನ ಬೆಲೆಗಿಂತಲೂ ಕೂಲಿಯ ದರವೇ ದುಪ್ಪಟ್ಟಾ
ಗುತ್ತದೆ ಎಂಬುದು ರೈತರ ಅಳಲಾಗಿದೆ. ಬಲಿತಿರುವ ಕಾಯಿಯೊಂದಿಗೆ ಹಣ್ಣನ್ನು ಕೊಯ್ಲು ಮಾಡಿದರೆ ಮಳೆ ಸುರಿಯುತ್ತಿರುವುದರಿಂದ ಒಣಗಿಸಲು ಸಾಧ್ಯವಾಗದೆ ನಷ್ಟ ಅನುಭವಿಸ ಬೇಕಾಗಿರುವುದರಿಂದ ಹಣ್ಣಾಗುತ್ತಿರುವ ಕಾಫಿಯು ಬೆಳೆಗಾರರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

‘ಅಕಾಲಿಕವಾಗಿ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಮಳೆ ಸುರಿದಿದ್ದರಿಂದ ಕಾಫಿಯು ಅವಧಿಗೆ ಮುನ್ನವೇ ಹಣ್ಣಾಗು ತ್ತಿದೆ. ಈಗ ಧಾರಾಕಾರವಾಗಿ ಮಳೆ
ಯಾಗುತ್ತಿರುವುದರಿಂದ ಹಣ್ಣಾಗಿರುವ ಕಾಫಿ ಒಡೆಯಲು ಪ್ರಾರಂಭವಾಗಿದ್ದು, ಮಳೆಯ ರಭಸಕ್ಕೆ ಹಣ್ಣು ಉದುರತೊಡಗುತ್ತದೆ. ಅರೇಬಿಕಾ ಉದು ರವುದರಿಂದ ಕೊಳೆರೋಗ ಬರುವ ಸಾಧ್ಯತೆ ಕೂಡ ಇದೆ’ಎನ್ನುತ್ತಾರೆ ಕಾಫಿ ಬೆಳೆಗಾರ ಎಚ್.ಎಂ. ಅಮರನಾಥ್.

‘ಅಕ್ಟೋಬರ್ ಅಂತ್ಯದವರೆಗೂ ಮಳೆಗಾಲ ಇರುವುದರಿಂದ ಅಲ್ಲಿಯ ವರೆಗೂ ಹಣ್ಣಿನ ಕಟಾವು ಅಸಾಧ್ಯ
ವಾಗುತ್ತದೆ. ಒಂದು ವೇಳೆ ಕಟಾವು ಮಾಡಿದರೂ ಒಣಗಿಸುವುದು ಅಸಾಧ್ಯ
ವಾಗುತ್ತದೆ. ಹಣ್ಣನ್ನು ಬಿಡಿಸಲು ಕೂಡ ದುಬಾರಿ ವೆಚ್ಚವಾಗುವುದರಿಂದ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT