ನರಸಿಂಹರಾಜಪುರ: ‘ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯ ಫಲಿತಾಂಶದ ಬಗ್ಗೆ ಜನರಿಗೆ ಸತ್ಯಾಂಶ ತಿಳಿಸುವುದನ್ನು ಬಿಟ್ಟು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದನ್ನು ನಿಲ್ಲಿಸಬೇಕು’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿ. ನಿಲೇಶ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ನವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಬಗ್ಗೆ ಮತಗಳವು ಮಾಡಿದ್ದಾರೆ, ತಿದ್ದಿದ್ದಾರೆ ಎಂದು ಬಾಲಿಷ ಹೇಳಿಕೆ ನೀಡುವುದನ್ನು ಬಿಟ್ಟು ಸತ್ಯಾಸತ್ಯತೆ ತಿಳಿಸುವ ಕೆಲಸ ಮಾಡಲಿ. ನ್ಯಾಯಾಲಯದ ಆದೇಶಕ್ಕೆ, ಸಂವಿಧಾನಕ್ಕೆ ತಲೆಬಾಗಿ ನಡೆಯುವುದನ್ನು ಕಾಂಗ್ರೆಸ್ನವರು ಕಲಿತುಕೊಳ್ಳಬೇಕು’ ಎಂದರು.

2023ರ ವಿಧಾನಸಭಾ ಚುನಾವ ಣೆಯ ಮತ ಎಣಿಕೆಯ ಸಂದರ್ಭದಲ್ಲಿ ಅಂಚೆಮತಗಳ ಎಣಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಇವಿಎಂ ಮತ ಎಣಿಕೆ ಮಾಡಲಾ ಗಿತ್ತು. ಸಂಜೆ ವೇಳೆಗೆ ಅಂಚೆ ಮತಗಳ ಎಣಿಕೆ ಸಮರ್ಪಕವಾಗಿಲ್ಲ, ಅದನ್ನು ಮರು ಎಣಿಕೆ ಮಾಡುವಂತೆ ಬಿಜೆಪಿಯಿಂದ ಚುನಾವಣಾ ಅಧಿಕಾರಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಆಕ್ಷೇಪಣಾ ಅರ್ಜಿ ಗಣನೆಗೆ ತೆಗೆದುಕೊಳ್ಳದೆ ಚುನಾವಣಾಧಿಕಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆಂದು ಘೋಷಿಸಿದ್ದರು ಎಂದು ಆರೋಪಿಸಿದರು.

ಮೂರು ವರ್ಷಗಳ ಹೋರಾಟದ ಫಲವಾಗಿ ಮೇ 2ರಂದು ಹೈಕೋರ್ಟ್ ಅಂಚೆ ಮತಗಳ ಮರು ಎಣಿಕೆಗೆ ಅವಕಾಶ ಕಲ್ಪಿಸಿತು. ಕಾನೂನಾತ್ಮಕ ವ್ಯವಸ್ಥೆಯಲ್ಲಿ ಮರು ಎಣಿಕೆಯಾಗಿ ಜೀವರಾಜ್ 52 ಮತಗಳಿಂದ ಗೆಲುವು ಸಾಧಿಸಿದ್ದರಿಂದ ಚುನಾವಣಾ ಅಧಿಕಾರಿ ಫಲಿತಾಂಶ ಪ್ರಕಟಿಸಿ ಪ್ರಮಾಣ ಪತ್ರ ನೀಡಿ, ವಿಧಾನಸಭಾಧ್ಯಕ್ಷರು ಪ್ರಮಾಣ ವಚನ ಬೋಧಿಸಿದ್ದರು. ಆನಂತರದಲ್ಲಿ ಕಾಂಗ್ರೆಸ್ನವರು ಅವಾಚ್ಯ ಶಬ್ದಗಳನ್ನು ಬಳಸಿ ಜೀವರಾಜ್ ವಿರುದ್ಧ ಅಪಪ್ರಚಾರ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಬಿಜೆಪಿ ಮುಖಂಡರಾದ ಕೆಸವೆ ಮಂಜುನಾಥ್, ಬಿ.ಎಸ್. ಆಶೀಶ್ ಕುಮಾರ್, ರಶ್ಮಿ ದಯಾನಂದ, ಲೋಕೇಶ್, ಸಜಿ, ವೈ.ಎಸ್. ರವಿ, ಜಗದೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-126-490676250

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.