ಚಿಕ್ಕಮಗಳೂರು: ಕೇಂದ್ರ ಸರ್ಕಾರ ಯುದ್ಧದ ನೆಪದಲ್ಲಿ ಅಡುಗೆ ಅನಿಲವನ್ನು ಅಸಮರ್ಪಕ ವಿತರಣೆ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ನಗರದ ಆಜಾದ್ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಕಾರ್ಯಕರ್ತರು ಸೌದೆ ಒಲೆ ಹಾಕಿ ಟೀ ತಯಾರಿಸುವ ಮೂಲಕ ವಿನೂತವಾಗಿ ಪ್ರತಿಭಟನೆ ನಡೆಸಿ ಗ್ಯಾಸ್ ಅಸಮರ್ಪಕ ವಿತರಣೆಗೆ ಪ್ರತಿರೋಧ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಅಂಶುಮಂತ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷದಿಂದ ನಿರಂತರವಾಗಿ ಕೊಟ್ಟ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಈ ಹಿಂದೆ ಬ್ಯಾಂಕ್ ಮುಂದೆ ಗ್ರಾಹಕರು ಕ್ಯೂ ನಿಲ್ಲಿಸಿದ್ದ ಸರ್ಕಾರ ಈಗ ಗ್ಯಾಸ್ ಸಿಲಿಂಡರ್ ಪಡೆಯಲು ಕ್ಯೂ ನಿಲ್ಲಿಸಿದೆ ಎಂದರು.

ಗ್ಯಾಸ್ ಇಲ್ಲದೆ ಹೊಟೇಲ್ಗಳು ಮುಚ್ಚುತ್ತಿವೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೆಂಟ್ ಬಂದ್ ಮಾಡಿದ್ದಾರೆ. ದೇಶದ ರಾಜತಾಂತ್ರಿಕತೆ ಹದಗೆಟ್ಟಿದ್ದು, ವಿದೇಶಿ ಪಾಲಿಸಿಗಳನ್ನು ಟ್ರಂಪ್ ಮಾತು ಕೇಳಿ ಧಿಕ್ಕರಿಸಲಾಗಿರುವ ಪರಿಣಾಮವನ್ನು ಇಂದು ಜನರು ಎದುರಿಸಬೇಕಾಗಿದೆ. ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿಲುವುಗಳಿಂದ ಆತಂಕ ಹೆಚ್ಚಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಸಿಡಿಎ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಮಾತನಾಡಿ, ದೇಶದ ನಾಗರೀಕರಿಗೆ ಮೂಲಸೌಕರ್ಯ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ತಾಳಕ್ಕೆ ಮೋದಿ ಕುಣಿಯುತ್ತಿದ್ದಾರೆ. ದೇಶದ ಜನರನ್ನು ಅಧೋಗತಿಯತ್ತ ತಳ್ಳಿದ್ದಾರೆ ಎಂದು ಟೀಕಿಸಿದರು. ಗ್ಯಾಸ್ಗಳನ್ನು ಹೋಟೆಲ್ಗಳಲ್ಲಿ, ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಕಾರಣ ಎಂದು ದೂರಿದರು.

ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್ ಮಾತನಾಡಿ, ಗ್ಯಾಸ್, ಪೆಟ್ರೋಲ್, ಡಿಸೇಲ್ ಮತ್ತಿತರೆ ಸೌಲಭ್ಯಗಳನ್ನು ನೀಡುವುದು ಕೇಂದ್ರದ ಹೊಣೆಗಾರಿಕೆ. ಆದರೆ ಯುದ್ದದ ನೆಪದಲ್ಲಿ ಈಗ ಅಡುಗೆ ಅನಿಲವೇ ಸಿಗದಂತಾಗಿದೆ. ನಮ್ಮ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ತಾಳಿರುವ ಎನ್ಡಿಎ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಎಂ.ಸಿ. ಶಿವಾನಂದ ಸ್ವಾಮಿ, ಪ್ರವೀಣ್ ಬೆಟ್ಟಗೆರೆ, ಮಲ್ಲೇಶಸ್ವಾಮಿ, ಹಿರೇಮಗಳೂರು ರಾಮಚಂದ್ರ, ತನೋಜ್ ನಾಯ್ಡು, ಸಿಲ್ವಸ್ಟರ್, ಎಂ.ಡಿ. ರಮೇಶ್, ಪ್ರಸಾದ್ ಅಮೀನ್, ಹಿರೇಗೌಜ ಶಿವಕುಮಾರ್, ಸಂತೋಷ್ ಲಕ್ಯಾ, ಶ್ರೀಕಾಂತ್, ಪ್ರಕಾಶ್ ರೈ, ರೂಬೆನ್ ಮೊಸಸ್, ಲಾಕೇಶ್, ಪರಮೇಶ್ ರಾಜ್ ಅರಸ್, ರಾಜು, ಮಂಜುಳಾ ಲಕ್ಷ್ಮಣ್, ಕುಸುಮಭರತ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.