ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಕಾಫಿನಾಡಿನ ಹೋಂ ಸ್ಟೇನಲ್ಲಿ 3 ದಿನ ತಂಗಿದ್ದರು

ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್ ತನಿಖಾ ತಂಡವು ಚಿಕ್ಕಮಗಳೂರಿನ ಕೈಮರ ಸಮೀಪದ ಬಾನ್ ಆಫ್ ಬೆರ್ರಿ ಹೋಂ ಸ್ಟೇನಲ್ಲಿ ಶನಿವಾರ ಪರಿಶೀಲನೆ ನಡೆಸಿದ್ದಾರೆ.
ತನಿಖಾ ತಂಡದವರು ಹೋಂ ಸ್ಟೇ ನೌಕರರಿಂದ ಮಾಹಿತಿ ಕಲೆ ಹಾಕಿದ್ದಾರೆ. ಯಾವ್ಯಾವ ತಾಣಗಳಿಗೆ ಭೇಟಿ ನೀಡಿದ್ದರು ಎಂಬ ವಿವರ ಪಡೆದಿದ್ದಾರೆ.
‘ಸಂತೋಷ್ ಅವರು ಎಷ್ಟು ದಿನ ತಂಗಿದ್ದರು ಮತ್ತು ಅವರ ಚಲನವಲನಗಳ ಕುರಿತು ಪೊಲೀಸರು ಮಾಹಿತಿ ಪಡೆದುಕೊಂಡರು. ಸಂತೋಷ್ ಜೊತೆ ತಂಗಿದ್ದ ಒಬ್ಬರನ್ನು ಕರೆ ತಂದಿದ್ದರು’ ಎಂದು ಹೋಂ ಸ್ಟೇ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ: ತಲೆದಂಡದಲ್ಲೂ ಶಕ್ತಿ ಪ್ರದರ್ಶನ
ಸಂತೋಷ್ ಅವರು ಗೆಳೆಯರೊಂದಿಗೆ ಏ. 8, 9 ಹಾಗೂ 10 ರಂದು ತಂಗಿದ್ದರು 11ರಂದು ಉಡುಪಿಗೆ ತೆರಳಿದ್ದರು ತಿಳಿದು ಬಂದಿದೆ.
ಸಂತೋಷ್ ಅವರು ಕೆ.ಎಸ್.ಈಶ್ವರಪ್ಪ ವಿರುದ್ಧ ಶೇ 40 ಕಮಿಷನ್ ಆರೋಪ ಮಾಡಿದ್ದರು. ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.