ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ರಗತಿಯಲ್ಲಿ ಸಹಕಾರ ಸಂಘ ಪಾತ್ರ ಹಿರಿದು: ಬೆಳ್ಳಿಪ್ರಕಾಶ್

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿ ಮತ್ತು ಗೋದಾಮು ಉದ್ಘಾಟನೆ
Last Updated 17 ನವೆಂಬರ್ 2022, 6:24 IST
ಅಕ್ಷರ ಗಾತ್ರ

ಕಡೂರು : ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಕ್ಷೇತ್ರಗಳ ಪಾತ್ರ ಪ್ರಮುಖ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೇಳಿದರು.

ತಾಲ್ಲೂಕಿನ ಮತಿಘಟ್ಟ ಗ್ರಾಮದಲ್ಲಿ ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿ ಮತ್ತು ಗೋದಾಮು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ದುರ್ಬಲ ವರ್ಗದ ಏಳಿಗೆಗೆ ಶ್ರಮಿಸುವುದು ಸಹಕಾರ ಸಂಘಗಳ ಮುಖ್ಯ ಉದ್ದೇಶವಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿದೇರ್ಶಕ ಬಸವರಾಜಪ್ಪ ಮಾತನಾಡಿ, ಮತಿಘಟ್ಟ ವ್ಯವಸಾಯ ಸೇವಾ ಸಹಕಾರ ಸಂಘವು ಇದುವರೆಗೂ ₹2.75 ಕೋಟಿ ಸಾಲ ವಿತರಣೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ₹6.9 ಕೋಟಿ ಸಾಲ ವಿತರಣೆಯಾಗಿದೆ. ರೈತರಿಂದ ₹3.5 ಕೋಟಿ ಹೊಸ ಸಾಲ ಮತ್ತು ಹೆಚ್ಚುವರಿ ಸಾಲ ಮಂಜೂರಾತಿಗಾಗಿ ಅರ್ಜಿಗಳು ಸಲ್ಲಿಕೆಯಾಗಿವೆ. ಒಟ್ಟು ₹10 ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸಲಾಗಿದೆ ಎಂದರು.

ಸಪ್ತಾಹದ ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ ರಫ್ತು ವೃದ್ಧಿಗಾಗಿ ಜೆಮ್ ಪೋರ್ಟಲ್‌ ಬಳಕೆ ಕುರಿತು ಸಂವಾದ ನಡೆಯಿತು. ಸಹಕಾರ ಸಪ್ತಾಹವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಡಿ.ಎಸ್. ಸುರೇಶ್ ಉದ್ಘಾಟಿಸಿದರು. ಮತಿಘಟ್ಟ ಸಹಕಾರ ಸಂಘದ ಅಧ್ಯಕ್ಷ ಸಿ.ಪಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಹಕರ ಮಾರಾಟ ಮಹಾಮಂಡಳದ ನಿರ್ದೇಶಕ ಲೋಕಪ್ಪಗೌಡ, ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ದಿವಾಕರ್, ನಿರ್ದೇಶಕ ಕುಶ ಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಮೇಶ್, ನಿರ್ದೇಶಕ ಶೆಟ್ಟಿಹಳ್ಳಿ ರಾಮಜ್ಜ, ಉಪಾಧ್ಯಕ್ಷೆ ವನಜಾಕ್ಷಿ ಕುಬೇರಪ್ಪ, ನಿರ್ದೇಶಕರಾದ ಸಿ.ಎಚ್. ಕುಶಕುಮಾರ್, ಕೆ.ಎಸ್.ಓಂಕಾರಪ್ಪ, ಆರ್. ದಿನೇಶ್, ಎಸ್.ಜೆ. ಓಂಕಾರಪ್ಪ, ಬಿ. ರಾಜಪ್ಪ, ಬಿ.ಡಿ. ಶ್ರೀನಿವಾಸ್‌ ಮೂರ್ತಿ, ಸುನಂದ ಶೇಖರಪ್ಪ, ಲಕ್ಷ್ಮಿಬಾಯಿ ತಿಮ್ಮಾನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT