ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಪಣಕ್ಕಿಟ್ಟು ಸಮಾಜಕ್ಕಾಗಿ ಅ‘ಪ್ರತಿಮ’ ಸೇವೆ

ವಾಟೆಕೊಳಲಿನ ಆಶಾ ಸುಗಮಕಾರರಾದ ಪ್ರತಿಮಾ
Last Updated 26 ಜೂನ್ 2020, 6:16 IST
ಅಕ್ಷರ ಗಾತ್ರ
ADVERTISEMENT
""

ಕಳಸ: ಕಳಸ ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಈವರೆಗೆ ಪತ್ತೆಯಾಗಿಲ್ಲ ಎಂದರೆ ಅದಕ್ಕೆ ಆಶಾ ಕಾರ್ಯಕರ್ತೆ ಯರ ಶ್ರಮ ದೊಡ್ಡದು. ಇದರ ನೇತೃತ್ವ ವಹಿಸಿರುವ ಮಾಗಲಿನ ವಾಟೆ ಕೊಳಲು ನಿವಾಸಿ ಆಶಾ ಸುಗಮಕಾರರಾದ ಪ್ರತಿಮಾ 11 ವರ್ಷಗಳಿಂದ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಅವಧಿಯ ಅವರ ಅನುಭವ ಇಲ್ಲಿದೆ.

‘3 ತಿಂಗಳಿಂದ ನಮ್ಮ ತಂಡ ಕುಟುಂಬಗಳ ಹಿತ ಮರೆತು, ಈ ರೋಗದ ಸೋಂಕು ಹರಡದದಂತೆ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಕೊರೊನಾ ಸಂಕಟದ ಅವಧಿಯಲ್ಲಿ ಹೊರಗಿನ ಜಿಲ್ಲೆ, ರಾಜ್ಯದಿಂದ ಬಂದವರನ್ನು ಗುರುತಿಸಿ ಅವರನ್ನು ಕ್ವಾರಂಟೈನ್ ಮಾಡುವ ಜವಾಬ್ದಾರಿ ಆರೋಗ್ಯ ಇಲಾಖೆ ಮೇಲೆ ಇತ್ತು. ವೈದ್ಯಾಧಿಕಾರಿ ಡಾ.ಪ್ರೇಮ್ ಕುಮಾರ್ ನಿರ್ದೇಶನದಂತೆ ಈವರೆಗೆ ಅಂತಹ 300ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಿ, ಕಳಸಕ್ಕೆ ಕೊರೊನಾ ಸೋಂಕು ಬಾರದಂತೆ ತಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮದು’.

‘ಅಧಿಕಾರಿಗಳು ವಹಿಸಿದ್ದ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆ ಯಿಂದ ಮಾಡಿದ್ದೇವೆ. ಹೊರಗಿನಿಂದ ಬಂದ ಯಾರೊಬ್ಬರನ್ನೂ ಬಿಡದೆ ಎಲ್ಲರ ಮನವೊಲಿಸುವುದು, ಆರೋಗ್ಯ ಸಲಹೆ ನೀಡುವುದು, ಕಟ್ಟುಪಾಡು ವಿಧಿಸುವುದು ಸವಾಲಿನ ಕೆಲಸವೇ ಆಗಿತ್ತು. ಎಲ್ಲ ಆಶಾ ಕಾರ್ಯಕರ್ತರೂ ಕೂಡ ಚಿಕ್ಕಮಕ್ಕಳನ್ನು ಹೊಂದಿರುವ ತಾಯಂದಿರೇ ಆಗಿದ್ದಾರೆ. ಆದರೂ ಈ ಅವಧಿಯಲ್ಲಿ ತಮ್ಮ ಕುಟುಂಬದ ವಿರೋಧ ಎದುರಿಸಿಯೂ ಕೊರೊನಾ ವಿರುದ್ಧದ ಕೆಲಸದಲ್ಲಿ ತೊಡಗಿದ್ದೇವೆ’

‘ಅನೇಕ ಕುಟುಂಬಗಳು ನಮ್ಮಿಂದಲೇ ಸೋಂಕು ಹರಡಬಹುದು ಎಂದು ನಮ್ಮನ್ನು ಮನೆಗಳಿಗೆ ಬಾರದಂತೆ ತಡೆದರೂ ಬೇಸರಿಸಿಕೊಳ್ಳದೆ ಆತ್ಮ ಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿದ್ದೇವೆ. ಕಳಸ ಪಟ್ಟಣ ಬಿಟ್ಟರೆ ಹೊರಗಿನ ಸಂಸೆ, ಹೊರನಾಡು ಮತ್ತಿತರ ಪ್ರದೇಶದಲ್ಲಿ ಮನೆಗಳು ಅತ್ಯಂತ ದೂರದಲ್ಲಿ ಇವೆ.ಆದರೂ ಪ್ರತಿದಿನ 10 ಕಿ.ಮೀಗೂ ಹೆಚ್ಚು ದೂರ ನಡೆದುಕೊಂಡು ಹೋಗಿ ಕರ್ತವ್ಯ ನಿರ್ವಹಿಸಿದ್ದೇವೆ.

‘ಹಿಂದೆಲ್ಲ ಆಶಾ ಕಾರ್ಯಕರ್ತ ರೆಂದರೆ ಜನ ನಿರ್ಲಕ್ಷ್ಯ ಮಾಡುತ್ತಿದ್ದರು. ಆದರೆ, ಕೊರೊನಾ ಅವಧಿಯ ಸೇವೆ ಜನರು ಮೆಚ್ಚುಗೆ ತೋರುತ್ತಿದ್ದಾರೆ. ಅಪಾಯ ಎದುರಿಸಿದ್ದು ಸಾರ್ಥಕವಾಗಿದೆ ಎಂಬ ಭಾವನೆ ಬರುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT