ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರಿಗೆ ಸೋಂಕು ಪತ್ತೆ; ನಾಲ್ವರು ಗುಣಮುಖ

Last Updated 27 ಜೂನ್ 2020, 17:02 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಶನಿವಾರ ಇಬ್ಬರಿಗೆ ಕೋವಿಡ್‌–19 ದೃಢಪಟ್ಟಿದೆ. ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ಧಾರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 22ಕ್ಕೆ ಇಳಿದಿದೆ.

ಚಿಕ್ಕಮಗಳೂರಿನ ಕಲ್ಯಾಣ ನಗರದ 37 ವರ್ಷದ ಪುರುಷಗೆ (ಪಿ–11031) ಹಾಗೂ ಮಹಾರಾಷ್ಟ್ರದಿಂದ ಮೂಡಿಗೆರೆ ತಾಲ್ಲೂಕಿಗೆ ಬಂದಿದ್ದ 70 ವರ್ಷದ ಪುರುಷಗೆ (ಪಿ–11031) ಸೋಂಕು ಪತ್ತೆಯಾಗಿದೆ. ಇಬ್ಬರನ್ನು ಚಿಕ್ಕಮಗಳೂರಿನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಿ– 7779, ಪಿ–7780, ಪಿ–8019 ಹಾಗೂ ಪಿ–8020 ಗುಣಮುಖರಾಗಿದ್ದು ಬಿಡುಗಡೆ ಮಾಡಲಾಗಿದೆ. ಅಜ್ಜಂಪುರ, ತರೀಕೆರೆ, ಕೊಪ್ಪ ತಾಲ್ಲೂಕಿನ ತಲಾ ಒಬ್ಬರು, ಜೈಲಿನ ಕೈದಿಯೊಬ್ಬರು ಗುಣಮುಖರಾಗಿದ್ದು ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

335ಮಾದರಿ ಪರೀಕ್ಷೆಗೆ ರವಾನೆ

ಕೊರೊನಾ ವೈರಾಣು ಸೋಂಕು ಪತ್ತೆ ನಿಟ್ಟಿನಲ್ಲಿ 335 ಮಂದಿಯ ಗಂಟಲಿನ ದ್ರವ ಮತ್ತು ಮೂಗಿನ ದ್ರವ ಮಾದರಿಯನ್ನು ಶನಿವಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

206 ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ದೃಢಪಟ್ಟಿಲ್ಲ. 752ಮಂದಿಯ ವರದಿ ಬರಬೇಕಿದೆ. 335ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ಕಂಟೈನ್ಮೆಂಟ್‌ ಪ್ರದೇಶ

ಅಜ್ಜಂಪುರ ತಾಲ್ಲೂಕಿನ ಹಿರೇಕಾನವಂಗಲದಲ್ಲಿ ಒಬ್ಬರಿಗೆ ಕೋವಿಡ್‌ ದೃಢಪಟ್ಟಿದ್ದು ಈ ಪ್ರದೇಶವನ್ನು ನಿಯಂತ್ರಿತ (ಕಂಟೈನ್ಮೆಂಟ್‌) ವಲಯವಾಗಿ ಘೋಷಿಸಲಾಘಿದೆ. ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ ಅವರನ್ನು ಘಟನಾ ಕಮಾಂಡರ್‌ ಆಗಿ ನೇಮಿಸಲಾಗಿದೆ.

ಚಿಕ್ಕಮಗಳೂರಿನ ಹೌಸಿಂಗ್‌ ಬೋರ್ಡ್‌ ಬಡಾವಣೆಯನ್ನು ಕಂಟೈನ್ ಪ್ರದೇಶವಾಗಿ ಘೋಷಿಸಲಾಗಿದೆ. ತಹಶೀಲ್ದಾರ್‌ ಡಾ.ಕಾಂತರಾಜ್‌ ಅವರನ್ನು ಘಟನಾ ಕಮಾಂಡರ್‌ ಆಗಿ ನೇಮಿಸಲಾಗಿದೆ.

ಚಿಕ್ಕಮಗಳೂರು ಕೊವಿಡ್‌–19 ಪ್ರಕರಣ ಅಂಕಿಅಂಶ

ಆರೋಗ್ಯ ತಪಾಸಣೆ: 393

ಹೋಂ ಕ್ವಾರಂಟೈನ್‌ ಇರುವವರು: 239

ಗುಣಮುಖ ಆದವರು: 25

ಮೃತಪಟ್ಟವರು: 01

ಹೋಂ ಕ್ವಾರಂಟೈನ್‌ ಪೂರ್ಣ:219

ಪರೀಕ್ಷೆಗೆ ಕಳಿಸಿದ ಮಾದರಿ: 6323

ವರದಿ ಪಾಸಿಟಿವ್‌: 48

ವರದಿ ನೆಗೆಟಿವ್‌: 5571

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT