ಬುಧವಾರ, ಜೂನ್ 16, 2021
23 °C
ಕೋವಿಡ್‌: 238 ಮಂದಿ ಗುಣಮುಖ

ಚಿಕ್ಕಮಗಳೂರಿನಲ್ಲಿ ಕೋವಿಡ್‌ಗೆ 3 ಸಾವು: 112 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್‌–19ನಿಂದಾಗಿ ಬುಧವಾರ ಮೂವರು ಸಾವಿಗೀಡಾಗಿದ್ದಾರೆ. 112 ಮಂದಿಗೆ ಸೋಂಕು ದೃಢಪಟ್ಟಿದೆ, 238 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ನಗರದ 65 ವರ್ಷದ ಪುರುಷ, ಕಡೂರಿನ ಇಬ್ಬರು ಪುರುಷರು (50 ವರ್ಷ, 71 ವರ್ಷ) ಮೃತಪಟ್ಟವರು.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 49, ಕಡೂರು–44, ತರೀಕೆರೆ– 16 , ಮೂಡಿಗೆರೆ– 2 ಹಾಗೂ ಶೃಂಗೇರಿ– ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

ಜಿಲ್ಲೆಯಲ್ಲಿ 810 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ 733 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 39 ಮಂದಿ (ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ಸಹಿತ) ಸಾವಿಗೀಡಾಗಿದ್ದಾರೆ. ಜಿಲ್ಲೆಯ ವಿವಿಧೆಡೆ 485 ನಿಯಂತ್ರಿತ ವಲಯ(ಕಂಟೈನ್‌ಮೆಂಟ್‌ ಝೋನ್‌)ಗಳು ಇವೆ. ಈವರೆಗಿನ ಒಟ್ಟು ಪ್ರಕರಣಗಳ ಸಂಖ್ಯೆ 1818ಕ್ಕೆ ಏರಿಕೆಯಾಗಿದೆ.

===

ಪಟ್ಟಿ

ಜಿಲ್ಲೆಯಲ್ಲಿ ಒಟ್ಟು:1818

ದಿನದ ಏರಿಕೆ: 112

ಸಕ್ರಿಯ ಪ್ರಕರಣ: 810

ದಿನದ ಇಳಿಕೆ: 129
ಗುಣಮುಖ: 733

ದಿನದ ಏರಿಕೆ: 238

ಸಾವು: 39

ದಿನದ ಏರಿಕೆ: 3

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.