ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಮಂದಿಗೆ ಕೋವಿಡ್‌ ಪತ್ತೆ; ಮೂವರು ಗುಣಮುಖ

Last Updated 7 ಜುಲೈ 2020, 15:52 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲಿ ಮಂಗಳವಾರ ನಗರಸಭೆ ಮಾಜಿ ಸದಸ್ಯರೊಬ್ಬರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಹಿತ ಆರು ಮಂದಿಗೆ ಕೋವಿಡ್‌ ದೃಢಪಟ್ಟಿದೆ. ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿದೆ.

52 ವರ್ಷದ ಪುರುಷ (ಪಿ–25377), 40 ವರ್ಷದ ಮಹಿಳೆ (ಪಿ–25378), 36 ವರ್ಷದ ಪುರುಷ (ಪಿ–25379), 21 ವರ್ಷದ ಪುರುಷ (ಪಿ–25380), 48ವರ್ಷದ ಪುರುಷ (ಪಿ–25381) ಹಾಗೂ ಬೆಂಗಳೂರಿನಿಂದ ನಗರಕ್ಕೆ ವಾಪಸಾಗಿರುವ 40 ವರ್ಷದ ಮಹಿಳೆಗೆ (ಪಿ–25376) ಕೋವಿಡ್‌ ಪತ್ತೆಯಾಗಿದೆ. ಎಲ್ಲರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರು ಮಂದಿ ಪೈಕಿ ಐವರು ಚಿಕ್ಕಮಗಳೂರು ತಾಲ್ಲೂಕು ಮತ್ತು ಒಬ್ಬರು ಮೂಡಿಗೆರೆ ತಾಲ್ಲೂಕಿನವರು. ಕೋವಿಡ್‌ ದೃಢಪಟ್ಟಿರುವ ಜಿಲ್ಲೆಯ ವಿಧಾನ ಪರಿಷತ್‌ ಸದಸ್ಯ ಪ್ರಾಣೇಶ್‌ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರಿಗೆ ದೃಢಪಟ್ಟಿದೆ.

410 ಮಂದಿ ಗಂಟಲು ದ್ರವ ಪರೀಕ್ಷೆಗೆ ರವಾನೆ

ಕೊರೊನಾ ವೈರಾಣು ಸೋಂಕು ಪತ್ತೆ ನಿಟ್ಟಿನಲ್ಲಿ 410 ಮಂದಿಯ ಗಂಟಲು ಮತ್ತು ಮೂಗಿನ ದ್ರವ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಮಂಗಳವಾರ ರವಾನಿಸಲಾಗಿದೆ.

31 ಮಂದಿಯ ಗಂಟಲ ದ್ರವ ಮತ್ತು ಮೂಗಿನ ದ್ರವ ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ಪತ್ತೆಯಾಗಿಲ್ಲ. 2103 ಮಂದಿಯ ಮಾದರಿ ಪರೀಕ್ಷೆ ವರದಿ ಬರಬೇಕಿದೆ. 407 ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ಪಟ್ಟಿ

ಚಿಕ್ಕಮಗಳೂರು ಕೊವಿಡ್‌–19 ಪ್ರಕರಣ ಅಂಕಿಅಂಶ

ಆರೋಗ್ಯ ತಪಾಸಣೆ: 410

ಹೋಂ ಕ್ವಾರಂಟೈನ್‌ ಇರುವವರು: 239

ಗುಣಮುಖ ಆದವರು: 51

ಮೃತರು: 01

ಹೋಂ ಕ್ವಾರಂಟೈನ್‌ ಪೂರ್ಣ: 329

ಪರೀಕ್ಷೆಗೆ ಕಳಿಸಿದ ಮಾದರಿ: 9582

ವರದಿ ಪಾಸಿಟಿವ್‌: 100

ವರದಿ ನೆಗೆಟಿವ್‌: 7479

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT