ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ನಾಲ್ವರು ಸಾವು, 259 ಮಂದಿಗೆ ಕೊರೊನಾ ಸೋಂಕು ಪತ್ತೆ

ಕೋವಿಡ್‌: 163 ಮಂದಿ ಗುಣಮುಖ
Last Updated 24 ಸೆಪ್ಟೆಂಬರ್ 2020, 4:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬುಧವಾರ ಸಾವಿಗೀಡಾದ ನಾಲ್ವರಲ್ಲಿ ಕೋವಿಡ್–19 ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಬುಧವಾರ 259 ಮಂದಿಗೆಸೋಂಕು ದೃಢಪಟ್ಟಿದ್ದು, 163 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಬೀರೂರಿನ 80 ವರ್ಷದ ಮಹಿಳೆ (ಪಿ– 519300), 55 ವರ್ಷದ ಪುರುಷ (ಪಿ–532652), ಕಡೂರು ತಾಲ್ಲೂಕು ಬಾಸೂರಿನ 40 ವರ್ಷದ ಪುರುಷ (ಪಿ–536175) ಹಾಗೂ ಚಿಕ್ಕಮಗಳೂರು ಹೌಸಿಂಗ್‌ ಬೋರ್ಡ್‌ನ 62 ವರ್ಷದ ಮಹಿಳೆ (ಪಿ–532642) ಮೃತಪಟ್ಟವರು.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಚಿಕ್ಕಮಗಳೂರು– 110, ತರೀಕೆರೆ– 70, ಕಡೂರು– 45, ಮೂಡಿಗೆರೆ– 15, ಕೊಪ್ಪ– 12, ಶೃಂಗೇರಿ– 4, ನರಸಿಂಹರಾಜಪುರ– ಮೂವರಿಗೆ ಸೋಂಕು ಪತ್ತೆಯಾಗಿದೆ.

ಈವರೆಗಿನ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 7607ಕ್ಕೆ ತಲುಪಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲ್ಲೂಕಿನಲ್ಲಿ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು 2091 ನಿಯಂತ್ರಿತ ವಲಯಗಳು ಇವೆ.

912 ಮಂದಿ ಮಾದರಿ ಸಂಗ್ರಹ

ಕೊರೊನಾ ವೈರಾಣು ಪರೀಕ್ಷೆ ನಿಟ್ಟಿನಲ್ಲಿ ಬುಧವಾರ 912 ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಬುಧವಾರದ ವರದಿಯಲ್ಲಿ 573 ಮಂದಿಗೆ ನೆಗೆಟಿವ್‌ ಬಂದಿದೆ.

1635ಮಾದರಿ ಪರೀಕ್ಷೆ ವರದಿ ಬರಬೇಕಿದೆ. 835 ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ನಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT