ಕಲಾಭಿರುಚಿ ರೂಢಿಸಿಕೊಳ್ಳಲು ಸಲಹೆ

7

ಕಲಾಭಿರುಚಿ ರೂಢಿಸಿಕೊಳ್ಳಲು ಸಲಹೆ

Published:
Updated:
Deccan Herald

ಚಿಕ್ಕಮಗಳೂರು: ಕಲೆಯಲ್ಲಿ ಅಭಿರುಚಿ ಬೆಳೆಸಿಕೊಂಡರೆ ಅಭಿವ್ಯಕ್ತಿಗೆ ದಾರಿಯಾಗುತ್ತದೆ ರಂಗಕರ್ಮಿ ಎಚ್.ಜನಾರ್ದನ (ಜನ್ನಿ) ಅಭಿಪ್ರಾಯಪಟ್ಟರು.

ಐಡಿಎಸ್‍ಜಿ ಸರ್ಕಾರಿ ಕಾಲೇಜಿನಲ್ಲಿ ಈಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‍ಎಸ್‍ಎಸ್– ಎನ್‍ಸಿಸಿ ಪಠ್ಯೇತರ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಧ್ಯಾನ, ಏಕಾಗ್ರತೆಯಿಂದ ಶಾಂತಿ, ಕರುಣೆ, ಸೌಹಾರ್ದತೆ ಮೂಡಿ ಮಾನವೀಯತೆಯಲ್ಲಿ ನೆಲೆಗೊಳ್ಳುವುದೇ ಸಂಸ್ಕೃತಿ. ಸಾಂಸ್ಕೃತಿಕ ಶಿಕ್ಷಣ ನೀಡಿದರೆ ಆತ್ಮವಿಶ್ವಾಸ ಮೂಡುತ್ತದೆ. ಶ್ರಮವಹಿಸಿ ಬೆವರು ಹರಿಸಿ ದುಡಿದು ತಿನ್ನುವುದನ್ನು ಯುವಪೀಳಿಗೆಗೆ ಕಲಿಸಬೇಕು. ಸಂಸ್ಕೃತಿಯ ಸೂಕ್ಷ್ಮಗಳನ್ನು ತಿಳಿಸಿದರೆ ಉಜ್ವಲ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಕಲಾತ್ಮಕತೆಯಿಂದ ಆಲೋಚನೆ ಪರಿಕಲ್ಪನೆ ದೊಡ್ಡಮಟ್ಟದಲ್ಲಿ ಪ್ರಕೃತಿಯಲ್ಲಿ ಲೀನವಾಗುತ್ತದೆ. ಕಲಾ ಚಟುವಟಿಕೆ ಎಂದರೆ ಕ್ರೀಡೆ, ಸಾಂಸ್ಕೃತಿಕ, ಎನ್‍ಎಸ್‍ಎಸ್, ಎನ್‍ಸಿಸಿ ಚಟುವಟಿಕೆಗೆ ಎಲ್ಲವೂ ಒಳಗೊಳ್ಳುತ್ತವೆ ಎಂದರು.

ಸಾಂಸ್ಕೃತಿಕ ಚಿಂತಕ ಕೃಷ್ಣಪ್ಪ ಮಾತನಾಡಿ, ಮಾನವೀಯ ಚಲನೆಗಳಿಗೆ ಯುವಜನರನ್ನು ತೊಡಗಿಸಬೇಕು. ಪರಂಪರೆಯನ್ನು ಸರಿಯಾಗಿ ಅವಲೋಕಿಸದೆ ವರ್ತಮಾನ ಕಟ್ಟಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ ಪ್ರತಿಭೆ ಅನಾವರಣಕ್ಕೆ ಇದೊಂದು ಉತ್ತಮ ವೇದಿಕೆ. ಸರ್ಕಾರಿ ಶಾಲೆಕಾಲೇಜುಗಳ ಶಿಕ್ಷಣದ ಬಗ್ಗೆ ಕೀಳರಿಮೆ ಇರಬಾರದು. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹದಾಯಕವಾಗಿವೆ. ಹಲವು ಕುಂದುಕೊರತೆಗಳ ನಡುವೆಯೂ ಆಸಕ್ತಿ ಅಭಿರುಚಿಗೆ ಸರ್ಕಾರಿ ಶಾಲಾಕಾಲೇಜುಗಳಲ್ಲಿ ಆದ್ಯತೆ ಇದೆ. ಆರೋಗ್ಯವೇ ಭಾಗ್ಯ. ಕ್ರೀಡೆಗಳಲ್ಲಿ ಭಾಗವಹಿಸಿ ದೇಹ ದಂಡಿಸಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಚಾಲಕ ಡಾ.ಮೂಡಲಗಿರಿಯಯ್ಯ, ಎನ್‍ಎಸ್‍ಎಸ್ ಅಧಿಕಾರಿ ಪ್ರೊ.ಸತೀಶ್, ಸುಧಾ, ದಿವ್ಯಾ, ಪ್ರೊ.ಯು.ಸಿ.ಮಹೇಶ್, ಪುಷ್ಪಾಭಾರತಿ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಯೋಗೀಶ್, ಎನ್‍ಎಸ್‍ಎಸ್ ಅಧಿಕಾರಿ ಕಿಶೋರ್‌ ಗುಜ್ಜಾರ್, ಎನ್‍ಸಿಸಿ ಅಧಿಕಾರಿ ಗುರುಸ್ವಾಮಿ ಇದ್ದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !