3

ದಲಿತ ಸಂಘಟನೆಗಳು ಒಗ್ಗೂಡಲು ಸಲಹೆ

Published:
Updated:
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿದರು.

ಚಿಕ್ಕಮಗಳೂರು: ದಲಿತರ ಅಭಿವೃದ್ಧಿಗೆ ಸಮುದಾಯದ ಎಲ್ಲ ಸಂಘಟನೆಗಳು ಒಗ್ಗೂಡುವ ಅವಶ್ಯಕತೆ ಇದೆ ಎಂದು ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಸಲಹೆ ನೀಡಿದರು.

ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾಜಿಕ ಸಮತಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಲಿತ ಸಂಘರ್ಷ ಸಮಿತಿ ಒಂದು ಕಾಲದಲ್ಲಿ ಬಲಿಷ್ಠ ಸಂಘಟನೆಯಾಗಿತ್ತು. ಇತ್ತೀಚೆಗೆ ಸಂಘಟನೆ ವಿವಿಧ ಬಣಗಳಾಗಿ ಒಡೆದು ಹೋಗಿರುವುದು ವಿಷಾಧನೀಯ. ಒಗ್ಗಟ್ಟಿನಿಂದ ಮಾತ್ರ ಸಮುದಾಯದ ಅಭಿವೃದ್ಧಿ ಎನ್ನುವುದನ್ನು ದಲಿತ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ದಲಿತರ ಉಪ ಪಂಗಡಗಳನ್ನು ಬದಿಗಿಟ್ಟು ಒಗ್ಗೂಡಬೇಕು ಎಂದರು.

ಸಮಿತಿಯ ವಿಭಾಗೀಯ ಸಂಚಾಲಕ ಮಲ್ಲೇಶ್ ಮಾತನಾಡಿ, ದಲಿತ ಯುವಕರು ಸಮುದಾಯದ ಸಂಘಟನೆಯಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.  ಸಿಪಿಐ ಮುಖಂಡ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ದೇಶದ ಎಲ್ಲ ಸಂಘಟನೆಗಳು ಸಿದ್ದಾಂತ ಬದಿಗೊತ್ತಿ ವ್ಯಕ್ತಿ ವಿಜೃಂಬಣೆಯತ್ತ ಆಸಕ್ತಿ ತೋರುತ್ತಿರುವುದರಿಂದ ಸಂಘಟನೆಗಳು ಬಲಹೀನವಾಗುತ್ತಿವೆ ಎಂದರು.

ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಮರ್ಲೆ ಅಣ್ಣಯ್ಯ, ಸದಸ್ಯರಾದ ಲಲಿತ, ರಾಮು, ಕೃಷ್ಣಮೂರ್ತಿ, ರುದ್ರಪ್ಪ, ಮಹೇಂದ್ರ ಸ್ವಾಮಿ, ಶಿವಣ್ಣ, ಬಿಎಸ್‌ಪಿ ಮುಖಂಡ ಪಿ.ವೇಲಾಯುಧನ್, ರೈತ ಸಂಘದ ಮುಖಂಡ ಗುರುಶಾಂತಪ್ಪ, ದಿ.ಎಂ.ಡಿ.ಗಂಗಯ್ಯ ಅವರ ಪತ್ನಿ ಉಮಾದೇವಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !