ಮೂಡಿಗೆರೆ: ಪಟ್ಟಣದ ಜೇಸಿಐ ಭವನದಲ್ಲಿ ಉಳ್ಳಾಲ ದಯಾನಂದ ನಾಯಕರ ಜನ್ಮಶತಾಬ್ದಿ ಕಾರ್ಯಕ್ರಮ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರೆಮಗಳೂರು ಕಣ್ಣನ್, ‘ಮನುಷ್ಯನಲ್ಲಿ ಸಮಾಜ ಕಟ್ಟುವ ಸುಗುಣಗಳಿರಬೇಕು. ರಾಮನ ಆದರ್ಶ ಪರಂಪರೆ ಇರಬೇಕು. ಮತ್ಸರ ಬಿಟ್ಟು ಸಮಾಜ ಬೆಳೆಸಬೇಕು ಎನ್ನುವ ಮೂಲಕ ದಯಾನಂದ ನಾಯಕರು ಅನೇಕ ನಾಯಕರನ್ನು ಹುಟ್ಟು ಹಾಕಿದರು. ಅವರ ಜೀವನ ಹಲವರಿಗೆ ಮಾದರಿ’ ಎಂದರು.
ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ. ‘ಉಳ್ಳಾಲದಿಂದ ವ್ಯಾಪಾರಕ್ಕಾಗಿ ಮೂಡಿಗೆರೆಗೆ ಬಂದವರು, ತಮ್ಮ ದುಡಿಮೆಯಲ್ಲಿ ಅಲ್ಪಪ್ರಮಾಣ ಉಳಿಸಿಕೊಂಡು ಉಳಿದೆಲ್ಲವನ್ನು ಸಮಾಜಕ್ಕೆ ದಾನ ಮಾಡಿದರು. ರಾಜಕಾರಣದಲ್ಲಿ ವೈಯಕ್ತಿಕ ಬೇಡ ನಿಃಸ್ವಾರ್ಥವಾಗಿ ಬದುಕೋಣ ಎಂದು ತೋರಿಸಿಕೊಟ್ಟಿದ್ದರು’ ಎಂದರು.
ಮಾಜಿ ಸಚಿವ ಬಿ.ಎಲ್. ಶಂಕರ್ ಮಾತನಾಡಿ, ‘ದಯಾನಂದ ನಾಯಕರು ಸಂಘಟನೆಗಾಗಿ ದುಡಿದವರು. ಎಂದಿಗೂ ರಾಜಕೀಯ ಸ್ಥಾನಮಾನಗಳಿಗೆ ಅಸೆಪಟ್ಟವರಲ್ಲ’ ಎಂದರು.