ಅಪೆಕ್ಸ್‌ ಬ್ಯಾಂಕು ‘ಎ’ ವರ್ಗದ ಬ್ಯಾಂಕುಗಳಲ್ಲಿ ಡಿಸಿಸಿ ಬ್ಯಾಂಕಿಗೆ ಪ್ರಶಸ್ತಿ ಗರಿ

7

ಅಪೆಕ್ಸ್‌ ಬ್ಯಾಂಕು ‘ಎ’ ವರ್ಗದ ಬ್ಯಾಂಕುಗಳಲ್ಲಿ ಡಿಸಿಸಿ ಬ್ಯಾಂಕಿಗೆ ಪ್ರಶಸ್ತಿ ಗರಿ

Published:
Updated:
Deccan Herald

ಚಿಕ್ಕಮಗಳೂರು: ಅಪೆಕ್ಸ್‌ ಬ್ಯಾಂಕು ‘ಎ’ ವರ್ಗದ ಬ್ಯಾಂಕುಗಳಲ್ಲಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕಿಗೆ ದ್ವಿತೀಯ ಬಹುಮಾನ ನೀಡಿದೆ ಎಂದು ವಿಧಾನ ಪರಿಷತ್‌ ಸದಸ್ಯ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರೂ ಆಗಿರುವ ಎಸ್‌.ಎಲ್‌.ಧರ್ಮೇಗೌಡ ಇಲ್ಲಿ ಸೋಮವಾರ ತಿಳಸಿದರು.

ಚಿಕ್ಕಮಗಳೂರು ಡಿಸಿಸಿ ಬ್ಯಾಂಕು 20 ಅಂಶಗಳ ಮಾರ್ಗಸೂಚಿಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಈ ಡಿಸಿಸಿ ಬ್ಯಾಂಕಿನ ಕಾರ್ಯಕ್ಷಮತೆ ಗುರುತಿಸಿ ಅಪೆಕ್ಸ್‌ ಬ್ಯಾಂಕು ಈ ಪುರಸ್ಕಾರ ನೀಡಿದೆ. 2016–17ನೇ ಸಾಲಿಗೆ ಈ ಪ್ರಶಸ್ತಿ ಸಂದಿದೆ. ₹ 2 ಲಕ್ಷ ನಗದು ಪುರಸ್ಕಾರ ಸಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರವು ರೈತರ ಸಾಲಮನ್ನಾ ಬಾಬ್ತಿಗೆ ಜಿಲ್ಲೆಗೆ ಸುಮಾರು ₹ 168 ಕೋಟಿ ಬಿಡುಗಡೆ ಮಾಡಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಘೋಷಿಸಿದ್ದ ₹ 50,000 ಅನುದಾನ ನೀಡಲಾಗಿದೆ. ರೈತರ ಸಾಲಮನ್ನಾ ಬಾಬ್ತು ₹ 420 ಕೋಟಿ ಇದ್ದು, ಹಂತಹಂತವಾಗಿ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ’ ಎಂದರು.

ಜಿಲ್ಲೆಯ ಕಳಸ, ಬುಕ್ಕಾಂಬುಧಿ ಹಾಗೂ ಪಂಚನಹಳ್ಳಿಯಲ್ಲಿ ಡಿಸಿಸಿ ಬ್ಯಾಂಕ್‌ ಶಾಖೆಗಳನ್ನು ಈಚೆಗೆ ಆರಂಭಿಸಲಾಗಿದೆ. ತರೀಕೆರೆ ಕೋಡಿಕ್ಯಾಂಪು, ದೇವನೂರು, ಯಗಟಿ, ಅಂತರಘಟ್ಟೆ, ಕಡೂರಿನಲ್ಲಿ ಶಾಖೆಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. ಜಿಲ್ಲೆಯಲ್ಲಿ ಶಾಖೆಗಳ ಸಂಖ್ಯೆ 29 ಆಗಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಬೆಳೆಸಾಲಕ್ಕೆ ನೀಡುವುದರಲ್ಲಿ ಪ್ರತಿವರ್ಷ ಶೇ 30ರಷ್ಟು ಕಡಿತಗೊಳಿಸುತ್ತಿದೆ. ಮಧ್ಯಮಾವಧಿ ಸಾಲ (₹ 10 ಲಕ್ಷ) ಪಡೆದಿರುವ ರೈತರು ಸಾಲವನ್ನು ಮರುಪಾವತಿ ಮಾಡಬೇಕು. ಮರುಪಾವತಿ ಪ್ರಗತಿ ಆಧರಿಸಿ ನಬಾರ್ಡ್‌ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಹೀಗಾಗಿ, ಸಕಾಲಕ್ಕೆ ಮರುಪಾವತಿ ಮಾಡಲು ಗಮನಹರಿಸಬೇಕು ಎಂದು ಮನವಿ ಮಾಡಿದರು.

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !