ಶುಕ್ರವಾರ, ನವೆಂಬರ್ 22, 2019
23 °C

ಡಿಸಿಸಿ ಬ್ಯಾಂಕ್ ವಾರ್ಷಿಕ ₹3.67 ನಿವ್ವಳ ಲಾಭ:ಎಸ್.ಎಲ್.ಧರ್ಮೇಗೌಡ

Published:
Updated:
Prajavani

ಚಿಕ್ಕಮಗಳೂರು:2018–19ನೇ ಸಾಲಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ) ₹3.67 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ ಹೇಳಿದರು.

ನಗರದ ಜಿಲ್ಲಾ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬ್ಯಾಂಕಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಯಾಂಕ್ ₹1034.97 ಕೋಟಿ ದುಡಿಯುವ ಬಂಡವಾಳ, ₹71 .06 ಕೋಟಿ ಸ್ವಂತ ಬಂಡವಾಳ, ₹659 ಕೋಟಿ ಠೇವಣಿ ಹೊಂದಿದೆ. ₹583.72 ಕೋಟಿ ಸಾಲ ನೀಡಲಾಗಿದೆ. ಈ ಪೈಕಿ ₹424.98 ಕೋಟಿ ಕೃಷಿ ಸಾಲ ನೀಡಲಾಗಿದೆ. ಒಟ್ಟು ₹698.08 ಕೋಟಿ ಸಾಲ ಬಾಕಿ ಇದೆ ಎಂದರು.

ಬ್ಯಾಂಕು ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ‘ಎ’ ಶ್ರೇಣೆ ಪಡೆದಿದೆ. ಈ ಸಾಲಿನಲ್ಲಿ ಕಳಸ, ಪಂಚನಹಳ್ಳಿ, ಬುಕ್ಕಾಂಬುದಿ, ಯಗಟಿ, ಅಂತರಘಟ್ಟೆ, ತರೀಕೆರೆ ಕೋಡಿಕ್ಯಾಂಪ್, ದೇವನೂರು, ಕಡೂರಿನ ಎಪಿಎಂಸಿ ಆವರಣದಲ್ಲಿ ಬ್ಯಾಂಕಿನ ಶಾಖೆಗಳನ್ನು ತೆರೆಯಲಾಗಿದೆ. ಮುಂದಿನ ಸಾಲಿಗೆ ಚಿಕ್ಕಮಗಳೂರಿನ ಗೃಹಮಂಡಳಿ ಬಡಾವಣೆ ಸಹಿತ ಜಿಲ್ಲಾಧ್ಯಂತ10 ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ 72 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಬ್ಯಾಂಕಿನ ಉಪಾಧ್ಯಕ್ಷ ದಿನೇಶ್ ಹೆಗಡೆ, ವಿಧಾನಪರಿಷತ್ತಿನ ಸದಸ್ಯ ಎಸ್.ಎಲ್.ಭೋಜೇಗೌಡ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಪ್ರಕಾಶ್, ಸಹಕಾರ ಸಂಘಗಳ ಉಪನಿಬಂಧಕ ಡೋಂಗ್ರೆ ಇದ್ದರು.

ಪ್ರತಿಕ್ರಿಯಿಸಿ (+)