ಭಾನುವಾರ, ಡಿಸೆಂಬರ್ 15, 2019
19 °C

ದೇವರಹಳ್ಳಿ ಕೆರೆ; ಬಾಲಕ ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ತಾಲ್ಲೂಕಿನ ಚಿಕ್ಕಗೌಜದ ಬಳಿಯ ದೇವರಹಳ್ಳಿ ಕೆರೆಯಲ್ಲಿ ಸೋಮವಾರ ಸಾದರಹಳ್ಳಿಯ ವರುಣ (16) ನೀರು ಪಾಲಾಗಿದ್ದಾನೆ.

ವರುಣ ನಗರದ ಎಂಇಎಸ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿ. ಸಾದರಹಳ್ಳಿಯ ಮೊಗಣ್ಣಗೌಡ ಅವರು ಪುತ್ರ.

ವರುಣ ಮತ್ತು ಸ್ನೇಹಿತ ಮಧ್ಯಾಹ್ನ ಕೆರೆ ಬಳಿಗೆ ತೆರೆಳಿದ್ದರು. ಕಾಲು ಜಾರಿ ಬಿದ್ದು ವರುಣ ನೀರು ಪಾಲಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ಏಳು ಮಂದಿ ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಕಾಯಾಚರಣೆ ನಡೆಸಿ ಶವವನ್ನು ಹೊರತೆಗೆದಿದ್ದಾರೆ.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಪ್ರತಿಕ್ರಿಯಿಸಿ (+)