ಸೋಮವಾರ, ನವೆಂಬರ್ 18, 2019
27 °C

ಡಿಕೆಶಿ ಬಂಧನ; ಬಿಜೆಪಿಗೆ ತಳಕು ಹಾಕಬೇಡಿ: ಸಚಿವ ಅಶೋಕ್‌

Published:
Updated:

ಚಿಕ್ಕಮಗಳೂರು: ‘ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಕಾನೂನು ತನ್ನ ಕ್ರಮಕೈಗೊಂಡಿದೆ’ ಎಂದು ಸಚಿವ ಆರ್‌.ಅಶೋಕ್‌ ಪ್ರತಿಕ್ರಿಯಿಸಿದರು.

ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿಯ ಪರಿಹಾರ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಬಾರದು. ಕಾಂಗ್ರೆಸ್‌ನವರು 60 ವರ್ಷ ದೇಶದಲ್ಲಿ ಆಡಳಿತ ಮಾಡಿದ್ದಾರೆ. ಆ ಕಾಲದಲ್ಲೂ ಬಹಳಷ್ಟು ಜನ ಜೈಲಿಗೆ ಹೋಗಿಬಂದಿದ್ದಾರೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನನ್ನನ್ನು, ಯಡಿಯೂರಪ್ಪ, ಅನಂತಕುಮಾರ್‌, ಸುರೇಶಕುಮಾರ್‌ ಅವರನ್ನು ಜೈಲಿಗೆ ಹಾಕಿದ್ದರು’ ಎಂದು ಉತ್ತರಿಸಿದರು.

‘ಶಿವಕುಮಾರ್‌ ಬಂಧನವನ್ನು ಬಿಜೆಪಿ ತಳಕು ಹಾಕುವ ಕೆಲಸ ಮಾಡಬಾರದು. ನಿಮ್ಮ ತಪ್ಪನ್ನು ನಮ್ಮ ಮೇಲೆ ಹೊರಿಸಬಾರದು. ಕಾನೂನು ಕ್ರಮಕ್ಕೂ, ಬಿಜೆಪಿಗೂ ಸಂಬಂಧ ಇಲ್ಲ’ ಎಂದರು.

ಪ್ರತಿಕ್ರಿಯಿಸಿ (+)