ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಕಾಲಕ್ಕೆ ನೇತ್ರ ತಪಾಸಣೆ ಮಾಡಿಸಿಕೊಳ್ಳಿ’

Last Updated 24 ಸೆಪ್ಟೆಂಬರ್ 2022, 5:50 IST
ಅಕ್ಷರ ಗಾತ್ರ

ಶೃಂಗೇರಿ: ‘ಪ್ರತಿ ತಿಂಗಳು 3ನೇ ವಾರ ಧನ್ವಂತರಿ ಆಸ್ಪತ್ರೆಯಲ್ಲಿ ಕಸ್ತೂರ್ಬಾ ಆಸ್ಪತ್ರೆಯ ನೇತ್ರ ತಜ್ಞರಿಂದ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದು, ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುಬೇಕು’ ಎಂದು ಆಸ್ಪತ್ರೆ ಕಾರ್ಯದರ್ಶಿ ಶೈಲಜಾ ರತ್ನಾಕರ್ ಹೆಗ್ಡೆ ಹೇಳಿದರು.

ಶೃಂಗೇರಿ ಶಾರದಾ ಧನ್ವಂತರಿ ಆಸ್ಪತ್ರೆಯಲ್ಲಿ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಹಯೋಗದಲ್ಲಿ ಆಯೋಜಿಸಿದ್ದ ನೇತ್ರ ತಪಾಸಣೆಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ವಯೋಸಹಜವಾಗಿ ಬರುವ ಕಣ್ಣಿನ ಪೊರೆ ಮತ್ತು ದೃಷ್ಟಿದೋಷಕ್ಕೆ 45 ವರ್ಷ ದಾಟಿದವರು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಸಕ್ಕರೆ ಕಾಯಿಲೆ, ಬಿಪಿ ಮುಂತಾದ ಕಾಯಿಲೆ ಇದ್ದವರು ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ’ ಎಂದರು.

ಡಾ.ಶೃತಿ ವಿಜೇಂದ್ರನ್ ಮಾತನಾಡಿ, ‘ಕಣ್ಣಿನ ಸಮಸ್ಯೆ ಇದ್ದವರು ಪರೀಕ್ಷೆಗೆ ಒಳಪಟ್ಟು ವೈದ್ಯರಿಂದ ಸಲಹೆ ಪಡೆಯಬೇಕು. ಕಣ್ಣು ದೇಹದ ಸೂಕ್ಷ್ಮ ಅಂಗವಾಗಿದ್ದು, ಅಗತ್ಯವಿರುವ ಚಿಕಿತ್ಸೆ ಪಡೆಯಬೇಕು. ವಿದ್ಯಾರ್ಥಿಗಳು ಮೊಬೈಲ್, ಟಿ.ವಿ. ಹೆಚ್ಚು ನೋಡುವುದರಿಂದ ಕಣ್ಣಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆಹಾರದಲ್ಲಿ ಸೊಪ್ಪು, ತರಕಾರಿ ಉಪಯೋಗಿಸುವುದು ಉತ್ತಮ’ ಎಂದರು.ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅನಂತನಾರಾಯಣ, ಸಂಪರ್ಕಾಧಿಕಾರಿ ಬಿ.ಎನ್ ಕೃಷ್ಣ, ಪತ್ರಕರ್ತರ ಸಂಘದ ಕೆ.ಎಲ್.ಗೋಪಾಲಕೃಷ್ಣ, ಸುಬ್ರಹ್ಮಣ್ಯ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT