ಕೊಗ್ರೆ ಬಳಿ ಭೂಕಂಪನ: ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

7

ಕೊಗ್ರೆ ಬಳಿ ಭೂಕಂಪನ: ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

Published:
Updated:
Deccan Herald

ಕೊಪ್ಪ : ತಾಲ್ಲೂಕಿನ ಮೇಗುಂದ ಹೋಬಳಿಯ ಕೊಗ್ರೆ ಸುತ್ತಮುತ್ತ ಸಂಭವಿಸುತ್ತಿರುವ ಭೂಕಂಪನ ಮತ್ತು ಭೂಮಿಯೊಳಗೆ ಭಾರಿ ಸದ್ದು ಕೇಳಿಬರುತ್ತಿರುವ ಪ್ರದೇಶಗಳಿಗೆ ಸೋಮವಾರ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಕೇಂದ್ರದ ಹಿರಿಯ ಭೂವಿಜ್ಞಾನಿ ದಯಾನಂದ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಇಲ್ಲಿನ ಅಬ್ಬಿಕಲ್ಲು ದೇವಸ್ಥಾನದ ಬಳಿ ಕಂಡು ಬಂದಿರುವ ಸುರಂಗವನ್ನು ವೀಕ್ಷಿಸಿದ ತಂಡ, ಇಲ್ಲಿಂದ ಮೇರುತಿ ಗುಡ್ಡದವರೆಗೆ ಸುರಂಗ ಮಾರ್ಗ ಇರಬಹುದೆಂಬ ಸ್ಥಳೀಯರ ಅಭಿಪ್ರಾಯದಂತೆ ಮೇರುತಿ ಪರ್ವತದ ಬಳಿ ತೆರಳಿ ಅಲ್ಲಿಯೂ ಪರಿಶೀಲನೆ ನಡೆಸಿತು.

ತಹಶೀಲ್ದಾರ್ ತನುಜಾ ಸವದತ್ತಿ, ಜಯಪುರ ಉಪ ತಹಶೀಲ್ದಾರ್ ರಾಮಣ್ಣ ನಾಡಿಗ್, ಠಾಣಾಧಿಕಾರಿ ಸೂರಪ್ಪ ಇನ್ನಿತರರು ಇದ್ದರು.

ಬೆಂಗಳೂರಿನ ತಂಡ ಭೇಟಿ ಇಂದು: ಕೊಗ್ರೆ ಸುತ್ತಮುತ್ತಲಿನ ಭೂಕಂಪನಪೀಡಿತ ಪ್ರದೇಶಗಳಿಗೆ ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ವಿಪತ್ತು ನಿರ್ವಹಣಾ ಪಡೆಯ ತಜ್ಞರು ಹಾಗೂ ಭೂಗರ್ಭ ಶಾಸ್ತ್ರಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಶಾಸಕ ಟಿ.ಡಿ. ರಾಜೇಗೌಡ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಹಾಜರಿರುವರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !