ಭಾನುವಾರ, ಸೆಪ್ಟೆಂಬರ್ 19, 2021
31 °C

ಚಿಕ್ಕಮಗಳೂರು: ಲಾರಿಗೆ ವಿದ್ಯುತ್ ತಂತಿ ತಗುಲಿ ಕ್ಲೀನರ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕಳಸ ತಾಲ್ಲೂಕಿನ ಬಾಳೆಹೊಳೆ  ಸಮೀಪ ಪಡೀಲ್ ಬಳಿ ಲಾರಿಗೆ ವಿದ್ಯುತ್ ತಂತಿ ತಗುಲಿ ಕ್ಲೀನರ್ ಅಮ್ಜದ್(32) ಸಾವಿಗೀಡಾಗಿದ್ದಾರೆ.

ನಸುಕಿನ 3 ಗಂಟೆ ಹೊತ್ತಿಗೆ ಅವಘಡ ಸಂಭವಿಸಿದೆ. ಅಮ್ಜದ್ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಗ್ರಾಮದವರು.

'ಲಾರಿಯಲ್ಲಿ ಜೆಸಿಬಿಯನ್ನು ಮಂಗಳೂರಿನಿಂದ ಶಿವಮೊಗ್ಗಕ್ಕೆ ಸಾಗಿಸಲಾಗುತ್ತಿತ್ತು. ಪಡೀಲ್ ಬಳಿ ಹಾದು ಹೋಗಿರುವ ವಿದ್ಯುತ್ ಲೇನ್ ತಂತಿ ಲಾರಿಯಲ್ಲಿನ ಜೆಸಿಬಿಗೆ ತಾಗುತ್ತದೆಯೇ ಎಂದು ನೋಡಲು ಕ್ಲೀನರ್ ನನ್ನು ಚಾಲಕ ಕೆಳಗಿಳಿಸಿದ್ದಾರೆ. ಇಳಿದ ಕೂಡಲೇ  ಕ್ಲೀನರ್ ಮೃತಪಟ್ಟಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

'ತಂತಿಯು ಜೆಸಿಬಿಗೆ ತಾಗಿದೆ. ಕ್ಲೀನರ್ ಚಪ್ಪಲಿ ಹಾಕಿರಲಿಲ್ಲ, ಅರ್ತಿಂಗ್ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ' ಎಂದು ತಿಳಿಸಿದ್ದಾರೆ.
ಕಳಸ ಪಿಎಸ್‌ಐ ಹರ್ಷವರ್ಧನ್ ಸ್ಥಳ ಪರಿಶೀಲನೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು