ಭಾನುವಾರ, ಡಿಸೆಂಬರ್ 8, 2019
19 °C

ಕಾಡಾನೆ ದಾಳಿ; ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ತಾಲ್ಲೂಕಿನ ನಿಡುಗೋಡು ಗ್ರಾಮದ ಹೊಡ್ಡಿಹೊಂಬಳ ಕಾಲೋನಿಯ ರಂಗಯ್ಯ(68) ಎಂಬುವರು ಕಾಡಾನೆ ದಾಳಿಗೆ ಸಿಲುಕಿ ಸೋಮವಾರ ಮೃತಪಟ್ಟಿದ್ದಾರೆ.

ಮಸಗಲಿ ಅರಣ್ಯ ಪ್ರದೇಶದಲ್ಲಿ ರಂಗಯ್ಯ ಎಂದಿನಂತೆ ದನ ಮೇಯಿಸಲು ಕಾಡಂಚಿಗೆ ಹೋಗಿದ್ದರು. ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮನೆಯವರು ಮತ್ತು ನೆರೆಹೊರೆಯವರು ಹುಡುಕಾಡಿದಾಗ ಶವ ಪತ್ತೆಯಾಗಿದೆ. ಆನೆ ತುಳಿತದ ಗುರುತುಗಳು ದೇಹದಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಮುದ್ದಣ್ಣ, ಮಲ್ಲಂದೂರು ಠಾಣೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು