ಬುಧವಾರ, ಜನವರಿ 27, 2021
27 °C

ಊರುಬಗೆ: ಮತ್ತೆ ಕಾಡಾನೆ ದಾಳಿ, ತೋಟಗಳಿಗೆ ತೆರಳಲು ಕಾರ್ಮಿಕರು ಹಿಂದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನ ಊರುಬಗೆ ಗ್ರಾಮದಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಗುರುವಾರ ಮುಂಜಾನೆ ಭತ್ತದ ಪೈರನ್ನು ನಾಶಗೊಳಿಸಿವೆ.

ಊರುಬಗೆ ಪ್ರದೇಶಕ್ಕೆ ಬಂದ ಮೂರು ಕಾಡಾನೆಗಳು, ಕೃಷ್ಣೇಗೌಡ ಎಂಬುವವರ ಭತ್ತದ ಗದ್ದೆಗೆ ಇಳಿದು, ನಾಟಿ ಮಾಡಿದ್ದ ಪೈರೆಲ್ಲವನ್ನೂ ನಾಶ ಗೊಳಿಸಿವೆ. ಸುತ್ತಮುತ್ತಲ ಕಾಫಿ ತೋಟ ಗಳಲ್ಲಿ ತಿರುಗಾಡಿ, ಕಾಫಿ, ಕಾಳು ಮೆಣಸು, ಏಲಕ್ಕಿ ಬೆಳೆಯನ್ನು ನಾಶಗೊಳಿ ಸಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮೂಲರಹಳ್ಳಿ, ಗುತ್ತಿ ಭಾಗಗಳಲ್ಲಿ ದಾಳಿ ನಡೆಸುತ್ತಿದ್ದ ಕಾಡಾನೆಗಳು, ಗುರುವಾರ ಊರುಬಗೆ ಪ್ರದೇಶಕ್ಕೂ ಕಾಲಿಟ್ಟಿದ್ದು, ಊರುಬಗೆ, ಸತ್ತಿಗನಹಳ್ಳಿ, ಹೊಸ್ಕೆರೆ, ಭೈರಾಪುರ, ಗೌಡಳ್ಳಿ ಭಾಗಗಳಲ್ಲಿ ಕಾಡಾನೆ ಭೀತಿ ಎದುರಾಗಿದೆ. ನಿರಂತರವಾಗಿ ಕಾಡಾನೆಗಳು ದಾಳಿ ಮಾಡುತ್ತಿರುವುದರಿಂದ ಕಾಫಿ ತೋಟಗಳಲ್ಲಿ ಚಟುವಟಿಕೆಗಳು ಸ್ತಬ್ಧವಾಗಿದ್ದು, ಕಾಫಿ ತೋಟಗಳಿಗೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

‘ಕಳೆದ 15 ದಿನಗಳಿಂದಲೂ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾಡಾನೆಗಳು ದಾಳಿ ನಡೆಸುತ್ತಿವೆ. ಮೂರು ಆನೆಗಳ ಒಂದು ತಂಡ ಹಾಗೂ ಒಂಟಿ ಸಲಗವೊಂದು ಪ್ರತ್ಯೇಕವಾಗಿ ದಾಳಿ ನಡೆಸುತ್ತಿದ್ದು, ಪ್ರತಿ ದಿನ ಬೆಳೆ ಹಾನಿಗೊಳಿಸುತ್ತಿವೆ. ಹಗಲು ವೇಳೆಯಲ್ಲಿ ಅರಣ್ಯ ಸೇರಿಕೊಳ್ಳುವ ಕಾಡಾನೆಗಳು, ರಾತ್ರಿಯಾಗುತ್ತಿದ್ದಂತೆ ಮನೆ ಬಾಗಿಲಿಗೆ ಬಂದು ಬಾಳೆ, ಕಾಫಿ, ಅಡಿಕೆ, ಭತ್ತದ ಬೆಳೆಯನ್ನು ನಾಶಗೊಳಿಸುತ್ತಿವೆ. ಕಾಡಾನೆಗಳ ದಾಳಿಯಿಂದ ಪಾರಾಗಲು ವಿಶೇಷ ಯೋಜನೆ ರೂಪಿಸಬೇಕು’ ಎಂದು ಗ್ರಾಮಸ್ಥ ರತನ್ ಊರುಬಗೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.