ಸೋಮವಾರ, ಜೂನ್ 21, 2021
29 °C

ಆನೆ ಸಾವು ಪ್ರಕರಣ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಸಮೀಪದ ಕಲ್ಲುಹೊಳೆ ಗ್ರಾಮದ ಹೊಲದಲ್ಲಿ ವಿದ್ಯುತ್ ಪ್ರವಹಿಸಿದ್ದ ಬೇಲಿಯ ತಂತಿ ತುಳಿದು ಗಂಡಾನೆ ಸಾವಿಗೀಡಾದ ಪ್ರಕರಣಕ್ಕೆ ಹುಲಿಯಪ್ಪ ಗೌಡ (47) ಎಂಬಾತನನ್ನು ಆರಣ್ಯ ಸಿಬ್ಬಂದಿ ಬಂಧಿಸಿದ್ದಾರೆ.

‘ಹೊಲದಲ್ಲಿ ಬೇಲಿಯ ತಂತಿಗೆ ವಿದ್ಯುತ್‌ ಹರಿಸಿದ್ದರಿಂದ ಮೇವಿಗಾಗಿ ಅರಸಿ ಬಂದ ಆನೆ ತಂತಿ ತುಳಿದು ಮೃತಪಟ್ಟಿತ್ತು. ಆರೋಪಿ ತಲೆ ಮರೆಸಿಕೊಂಡಿದ್ದ, ಪತ್ತೆಗೆ ಬಲೆ ಬೀಸಿದ್ದೆವು. ಜಾಡು ಹಿಡಿದು ಹೊಸ ಸಿದ್ಧರಹಳ್ಳಿ ಬಳಿ ಆರೋಪಿ ಹಿಡಿದಿದ್ದೇವೆ. ಕೋರ್ಟ್‌ಗೆ ಹಾಜರುಪಡಿಸುತ್ತೇವೆ‘ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಚ್‌.ಜಗನ್ನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿವಿಧೆಡೆ ಹೊಲಗಳಲ್ಲಿ ಬೇಲಿಗೆ ತಂತಿ ಅಳವಡಿಸಿದ್ದನ್ನು ತೆರವುಗೊಳಿಸಲಾಗಿದೆ. ಮೆಸ್ಕಾಂ ತಂಡ ಸಹಯೋಗದಲ್ಲಿ ಈ ಕಾರ್ಯಾಚರಣೆ ನಡೆಸಿದ್ದೇವೆ’ ಎಂದೂ ತಿಳಿಸಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ, ವಲಯ ಅರಣ್ಯಾಧಿಕಾರಿ ತನುಜ್ ಮತ್ತು ಸಿಬ್ಬಂದಿ ಕಾರ್ಯಚರಣೆಯಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು