ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿತೋಟದಲ್ಲಿ ಕಾಡಾನೆಗಳ ಹಿಂಡು: ಆತಂಕ

ಕುನ್ನಳ್ಳಿ, ದುಂಡುಗ ಭಾಗದಲ್ಲಿ ಕಾಣಿಸಿಕೊಂಡ ಗಜಪಡೆ– ಆತಂಕದಲ್ಲಿ ಜನತೆ
Last Updated 17 ಅಕ್ಟೋಬರ್ 2020, 5:57 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಹಳೇ ಮೂಡಿಗೆರೆ ಹಾಗೂ ಚಿನ್ನಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ 15ಕ್ಕೂ ಅಧಿಕ ಕಾಡಾನೆಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ.

ತಾಲ್ಲೂಕಿನ ಕುನ್ನಳ್ಳಿ, ದುಂಡುಗ, ಕೆಲ್ಲೂರು, ಹಳಸೆ ಗ್ರಾಮಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿವೆ. ಗುರುವಾರ ಸಂಜೆ ದುಂಡುಗ ಗ್ರಾಮದಲ್ಲಿ ಆರು ಕಾಡಾನೆಗಳು ಸಂಚರಿಸಿದ್ದು,
ಅದೇ ವೇಳೆಯಲ್ಲಿ ಕೆಲ್ಲೂರು ಭಾಗದಲ್ಲೂ ಏಳು ಕಾಡಾನೆಗಳು ಸಂಚರಿಸಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕುನ್ನಳ್ಳಿ, ದುಂಡುಗ, ಕೆಲ್ಲೂರು, ಹಳಸೆ ಭಾಗಗಳಲ್ಲಿನ ಹಲವು ಕಾಫಿ ತೋಟಗಳಲ್ಲಿ ಓಡಾಡಿ ಕಾಫಿ, ಅಡಿಕೆ, ಬಾಳೆ, ಕಾಳುಮೆಣಸು ಬೆಳೆಯನ್ನು ನಾಶ ಗೊಳಿಸಿವೆ. ಇದುವರೆಗೂ ತಾಲ್ಲೂಕಿನ ಭೈರಾಪುರ, ಹೊಸ್ಕೆರೆ, ಏರಿಕೆ, ತ್ರಿಪುರ, ಕೋಗಿಲೆ, ದೇವರಮನೆ, ಮೂಲರಹಳ್ಳಿ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆ ಗಳು, ಏಕಾಏಕಿ ಕಸಬಾ ಹೋಬಳಿಗೂ ಕಾಲಿಟ್ಟಿರುವುದು ಆತಂಕ ಸೃಷ್ಟಿಸಿದೆ.

ಇದ್ದಕ್ಕಿಂದ್ದಂತೆ ಕಾಡಾನೆಗಳು ಗುಂಪಿನಲ್ಲಿ ಕಾಣಿಸಿಕೊಂಡಿರುವುದು ಚಿನ್ನಿಗಾ, ಹಳೇಮೂಡಿಗೆರೆ, ಕಿರು ಗುಂದ, ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಭಯವನ್ನು ಉಂಟುಮಾಡಿವೆ.
ಶುಕ್ರವಾರ ನಸುಕಿನವರೆಗೂ ಕಾಡಾನೆ ಗಳು ಗುಂಪಿನಲ್ಲಿ ತಿರುಗಾಡಿರುವ ಹೆಜ್ಜೆ ಗುರುತುಗಳು ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡು ಬಂದಿದ್ದು, ಶುಕ್ರವಾರ ಈ ಭಾಗದ ಜನ ಜೀವನ ಬಹುತೇಕ ಸ್ತಬ್ಧವಾಗಿತ್ತು .

‘ಸಕಲೇಶಪುರ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿದ ಪರಿಣಾಮ ಕಾಡಾನೆಗಳು ತಾಲ್ಲೂಕಿಗೆ ಪ್ರವೇಶಿಸಿವೆ ಎನ್ನಲಾಗುತ್ತಿದೆ. ಈಗಾ ಗಲೇ ತಾಲ್ಲೂಕಿನಲ್ಲಿ ಎರಡು ಕಾಡಾನೆ ಗಳ ಒಂದು ತಂಡ, ಮೂರು ಕಾಡಾನೆ ಗಳ ಮತ್ತೊಂದು ತಂಡ ಹಾಗೂ ಒಂಟಿ ಸಲಗ ಪ್ರತಿನಿತ್ಯ ದಾಳಿ ನಡೆಸುತ್ತಿದ್ದವು. ಇದೀಗ ಹದಿನೈದಕ್ಕೂ ಹೆಚ್ಚು ಕಾಡಾನೆಗಳು ಒಟ್ಟಾಗಿ ಬಂದಿರುವುದು ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ’ಎಂದು ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಳೂರು ಹೇಳಿದ್ದಾರೆ.

ತಾಲ್ಲೂಕು ಕೇಂದ್ರದಿಂದ ನಾಲ್ಕೈದು ಕಿ. ಮೀ ದೂರಕ್ಕೆ ಕಾಡಾನೆ ಗಳು ಪ್ರವೇಶಿಸಿರುವುದು ಆತಂಕ ಹೆಚ್ಚಾ ಗಲು ಕಾರಣವಾಗಿದ್ದು, ಅನಾಹುತ ಸಂಭವಿಸುವ ಮುನ್ನ ಜಾಗೃತವಾಗಬೇಕು ಎಂಬುದು ಜನರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT