ಚಿಕ್ಕಮಗಳೂರು: ಸರ್ಫಾಸಿ ಕಾಯ್ದೆ ಹೆಸರಿನಲ್ಲಿ ಕಾಫಿ ಬೆಳೆಗಾರರಿಗೆ ಬ್ಯಾಂಕ್ ಅಧಿಕಾರಿಗಳು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಸಾಲ ತೀರಿಸಿದ್ದರೂ ದಾಖಲೆಗಳನ್ನು ಹಿಂದಿರುಗಿಸುತ್ತಿಲ್ಲ. ಇದೇ ರೀತಿ ಸತಾಯಿಸಿದರೆ ಕೆನರಾ ಬ್ಯಾಂಕ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ(ಕೆಜಿಎಫ್) ಅಧ್ಯಕ್ಷ ಹಳಸೆ ಶಿವಣ್ಣ ಎಚ್ಚರಿಸಿದರು.

ಇ–ಹರಾಜು ಹೆಸರಿನಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಸೇರಿಕೊಂಡು ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಈ ರೀತಿಯ ಕಿರುಕುಳ ನಿಲ್ಲಿಸದಿದ್ದರೆ ತೀವ್ರ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಮೂಡಿಗೆರೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡುವಿನಮಡಕಲ್ ಗ್ರಾಮದ ಕೆ.ಕೆ.ಸುರೇಶ್ ಅವರು ಸಾಲ ಪಡೆದುಕೊಂಡಿದ್ದು, ಮರುಪಾವತಿ ವಿಳಂಬವಾಗಿದೆ. ಅವರ ಆಸ್ತಿಯನ್ನು ಇ–ಹರಾಜು ಮಾಡಲು ಬ್ಯಾಂಕ್ ಮುಂದಾಗಿತ್ತು. ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ಸುರೇಶ್ ಅವರು ತಂದಿದ್ದಾರೆ. ಇತ್ತೀಚೆಗೆ ₹43 ಲಕ್ಷ ಮರುಪಾವತಿ ಮಾಡಿದ್ದಾರೆ. ಆದರೆ, ಈವರೆಗೆ ಸಾಲದ ಭದ್ರತೆಗಾಗಿ ನೀಡಿದ್ದ ತೋಟದ ಮೂಲ ದಾಖಲೆ ಹಿಂದಿರುಗಿಸಿಲ್ಲ. ಇ–ಹರಾಜಿನಲ್ಲಿ ಭಾಗವಹಿಸಿದ ವ್ಯಕ್ತಿಯನ್ನು ಸಂಪರ್ಕಿಸಿ ಮಾತನಾಡುವಂತೆ ಹೇಳುತ್ತಿದ್ದಾರೆ. ಮಧ್ಯವರ್ತಿಯೊಬ್ಬರು ₹1 ಕೋಟಿ ಕೇಳುತ್ತಿದ್ದಾರೆ ಎಂದರು.

ಸರ್ಫಾಸಿ ಕಾಯ್ದೆ ಅಡಿಯಲ್ಲಿ ಜಮೀನು ಹರಾಜು ಮಾಡದಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆರು ತಿಂಗಳು ಕಾಲಾವಕಾಶ ನೀಡಿ ಒಟಿಎಸ್(ಒನ್ ಟೈಮ್ ಸೆಟಲ್ಮೆಂಟ್) ಮೂಲಕ ಸಾಲ ತೀರುವಳಿಗೆ ಅವಕಾಶ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ. ಆದರೂ ಬ್ಯಾಂಕ್ ಅಧಿಕಾರಿಗಳು ಕಿರುಕುಳ ನಡೆಸುತ್ತಿದ್ದಾರೆ ಎಂದು ದೂರಿದರು.

ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ‘ಬ್ಯಾಂಕ್ ಅಧಿಕಾರಿಗಳ ಕಿರುಕುಳದಿಂದ ಬೆಳೆಗಾರರು ಬೇಸತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ನೀಡಲಾಗವುದು. ಬೆಳೆಗಾರರಿಗೆ ನ್ಯಾಯ ಸಿಗುವ ತನಕ ಹೋರಾಟ ಮುಂದುವರಿಯಲಿದೆ’ ಎಂದರು.

ಮುಖಂಡರಾದ ಬಿ.ಎಸ್.ಜೈರಾಮ್, ಸುರೇಶ್ಗೌಡ, ಅಶೋಕಕುಮಾರ್, ಹಾಲಪ್ಪ, ರತೀಶ್ ಕುಮಾರ್, ಸುರೇಂದ್ರ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ , ಕೆರೆಮಕ್ಕಿ ಮಹೇಶ್ ಹಾಜರಿದ್ದರು. ಬಳಿಕ ಬೆಳೆಗಾರರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.