ಚಿಕ್ಕಮ್ಮ ದೇವಿ ಜಾತ್ರೆ ಸಡಗರ

7

ಚಿಕ್ಕಮ್ಮ ದೇವಿ ಜಾತ್ರೆ ಸಡಗರ

Published:
Updated:

ಚಿಕ್ಕಮಗಳೂರು: ನಗರದ ಶಂಕರಪು ರದಲ್ಲಿ ಚಿಕ್ಕಮ್ಮದೇವಿ ಆಷಾಢ ಮಾಸ ಜಾತ್ರೆಯು ಮೂರು ದಿನ ಜರುಗಲಿದ್ದು, ಬೋಳರಾಮೇಶ್ವರ ದೇಗುಲದಿಂದ ಉತ್ಸವ ಮೂರ್ತಿಯನ್ನು ಕಲಾತಂಡಗಳ ಮೆರುಗಿನಲ್ಲಿ ಮೆರವಣಿಗೆಯಲ್ಲಿ ಗುರುವಾರ ರಾತ್ರಿ ಒಯ್ಯಲಾಯಿತು.

ವಿದ್ಯುತ್‌ ದೀಪಾಲಂಕಾರ, ಗೊಂಬೆ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಜನಪದ ಕಲಾತಂಡಗಳ ಮೆರುಗಿನಲ್ಲಿ ಮೆರವಣಿಗೆ ಸಾಗಿತು. ವಾದ್ಯಮೇಳ ಸಿರಿಯಲ್ಲಿ ಭಕ್ತರು ಖುಷಿಯಿಂದ ಸಂಭ್ರಮಿಸಿದರು.

ಸ್ಥಳೀಯ ದೇವಿಪ್ರಸಾದ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಶನಿವಾರದವರೆಗೆ ಜಾತ್ರೆ ಜರುಗುತ್ತದೆ. ಊರಿನಲ್ಲಿ ಸಡಗರ ಮೇಳೈಸಿದೆ. ಮೊದಲ ದಿನ ಮೆರವಣಿಗೆಯಲ್ಲಿ ಉತ್ಸವಮೂರ್ತಿಯನ್ನು ಒಯ್ಯುತ್ತೇವೆ. ಮೂರೂ ದಿನ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರುತ್ತೇವೆ. ಶನಿವಾರ ರಾತ್ರಿ 10 ಗಂಟೆಗೆ ಜಾತ್ರೆ ಸಂಪನ್ನವಾಗುತ್ತದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !