ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತರೀಕೆರೆ | ಅರಣ್ಯ ಇಲಾಖೆ ಕಿರುಕುಳ ಆರೋಪ: ರೈತರ ಪ್ರತಿಭಟನೆ

Published : 2 ಸೆಪ್ಟೆಂಬರ್ 2024, 15:41 IST
Last Updated : 2 ಸೆಪ್ಟೆಂಬರ್ 2024, 15:41 IST
ಫಾಲೋ ಮಾಡಿ
Comments

ತರೀಕೆರೆ: ತಾಲ್ಲೂಕಿನ ತರೀಕೆರೆ ಮತ್ತು ಲಕ್ಕವಳ್ಳಿ ಅರಣ್ಯ ವಲಯಗಳ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅರಣ್ಯ ಮತ್ತು ಎಂಪಿಎಂ ನೌಕರರು ಅನಗತ್ಯ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ರೈತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಶಾಸಕ ಜಿ.ಎಚ್. ಶ್ರೀನಿವಾಸ್, ಮಾಜಿ ಶಾಸಕ ಡಿ.ಎಸ್. ಸುರೇಶ್‍ ಮತ್ತು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ನರೇಂದ್ರ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದವು. ಎಪಿಎಂಸಿ ಆವರಣದಿಂದ ಅಪಾರ ಸಂಖ್ಯೆಯ ರೈತರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಮಿನಿ ವಿಧಾನ ಸೌಧದ ಮುಂಭಾಗಕ್ಕೆ ಬಂದು, ಅಲ್ಲಿ ಬಹಿರಂಗ ಸಭೆ ನಡೆಸಿದರು.

‘ಪಾರಂಪರಿಕ ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ನೀಡಬೇಕು. ಅರಣ್ಯ ವ್ಯಾಪ್ತಿಯಲ್ಲಿರುವ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು. ಭದ್ರಾ ಜಲಾಶಯದ ಮುಳುಗಡೆ ಸಂತ್ರಸ್ತರಿಗೆ ಆರಣ್ಯ ಇಲಾಖೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು. ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಅಡಿ 75 ವರ್ಷ ಕಾಲಮಿತಿಯನ್ನು ಸಡಿಲಗೊಳಿಸಿ 25 ವರ್ಷಕ್ಕೆ ಸೀಮಿತಗೊಳಿಸಬೇಕು. ಅರಣ್ಯ ಹಕ್ಕು ಕಾಯ್ದೆ ಆಡಿ ಮಂಜೂರಾದ ಬುಡಕಟ್ಟು ಜನಾಂಗದ ಭೂಮಿಗಳಿಗೆ 9 ರಿಂದ 11ಕ್ಕೆ ಸೇರಿಸುವುದು. ಅರಣ್ಯ ಮತ್ತು ಎಂ.ಪಿ.ಎಂ. ಅಧಿಕಾರಿಗಳು ರೈತರಿಗೆ ತೊಂದರೆ ಕೊಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ರೈತ ಮುಖಂಡರಾದ ತೀರ್ಥಪ್ಪ, ಮೂಡಲಗಿರಿಯಪ್ಪ, ಮಹೇಶಣ‍್ಣ, ಸೋಮಣ್ಣ, ಜಯ ಕರ್ನಾಟಕ ಜಗದೀಶ್, ಕೆ.ಆರ್. ಧೃವಕುಮಾರ್, ಮುನಿಸ್ವಾಮಣ್ಣ, ಗಂಗಾಧರ, ವಸಂತಕುಮಾರ್, ಎಚ್.ಎನ್. ಮಂಜುನಾಥ್, ಸೀತಾರಾಮ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT