ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತು

7

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿ ಹೆಜ್ಜೆ ಗುರುತು

Published:
Updated:
Deccan Herald

ಚಿಕ್ಕಮಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು 1927ರ ಆಗಸ್ಟ್‌ನಲ್ಲಿ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ಚಿಕ್ಕಮಗಳೂರು, ಕಡೂರಿಗೆ ಗಾಂಧೀಜಿ ಭೇಟಿ ನೀಡಿದ್ದರು. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಪ್ರಾಂಗಣದಲ್ಲಿ 1927ರ ಆಗಸ್ಟ್‌ 18 ರಂದು ಸಭೆ ನಡೆಸಿದ್ದಾರೆ. ಚಿಕ್ಕಮಗಳೂರು, ಸುತ್ತಮುತ್ತಲಿನ ಊರುಗಳ ಜನರು ಸಭೆಯಲ್ಲಿ ಭಾಗವಹಿಸಿದ್ದರು.

ಚಿಕ್ಕಮಗಳೂರಿನ ಪೌರಕಾರ್ಯನಿರ್ವಾಹಕ ಸಭೆ ಅಧ್ಯಕ್ಷ, ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆ ಸದ್ಯಸರೂ ಆಗಿದ್ದ ಬಿ.ಕೇಶವಯ್ಯ ಅವರು ಸಭೆಯಲ್ಲಿ ಭಿನ್ನವತ್ತಳೆ ಓದಿದ್ದರು.

‘ನಮ್ಮ ತಾತಾ ಕೇಶವಯ್ಯ ಅವರೇ ಗಾಂಧೀಜಿ ಅವರಿಗೆ ಭಿನ್ನವತ್ತಳೆ ಸಲ್ಲಿಸಿದ್ದರಂತೆ. ಗಾಂಧೀಜಿ ಅವರ ಭೇಟಿ ನಂತರ ಚಿಕ್ಕಮಗಳೂರಿನಲ್ಲಿ ಖಾದಿ ವಸ್ತ್ರಾಲಯಗಳು ಶುರುವಾದವು ಎಂದು ತಾತ ಹೇಳುತ್ತಿದ್ದರು’ ಎಂದು ವಕೀಲ ಬಿ.ಎನ್‌.ನಾಗಭೂಷಣ ನೆನಪಿಸಿಕೊಂಡರು.

‘ಕಡೂರಿನಲ್ಲಿ ಗಾಂಧೀಜಿ ಅವರು ಭಾಷಣ ಮಾಡಿದ್ದರು. ಗೆಳೆಯನೊಡಗೂಡಿ ಸಭೆಗೆ ಹೋಗಿದ್ದೆ. ಸಭೆ ನಂತರ ಕಾರ್ಯಕರ್ತರು ಪೆಪ್ಪರ್‌ಮೆಂಟು ಹಂಚಿದ್ದರು. ಆಗಿನ ಕಾಲದಲ್ಲಿ ಸಭೆ ಮುಗಿದಾಗ ಪೆಪ್ಪರ್‌ಮೆಂಟು ಕೊಡುತ್ತಿದ್ದರಿಂದ, ಆ ಆಸೆಗೆ ಅಲ್ಲಿಗೆ ಹೋಗಿದ್ದೆ’ ಎಂದು ಕಡೂರು ತಾಲ್ಲೂಕಿನ ಮಚ್ಚೇರಿಯ 92 ವರ್ಷದ ಎಂ.ಎಸ್‌.ವೆಂಕಟೇಶ್‌ ಅಯ್ಯಂಗಾರ್‌ ನೆನಪಿಸಿಕೊಂಡರು.

ನಿಧಿ ಸಂಗ್ರಹ

ಗಾಂಧೀಜಿ ಅವರು ಭದ್ರಾವತಿಯಿಂದ ಜಿಲ್ಲೆಗೆ ಬಂದಿದ್ದರು. ತರೀಕೆರೆ, ಬೀರೂರು, ಕಡೂರು ಮಾರ್ಗವಾಗಿ ಚಿಕ್ಕಮಗಳೂರು ತಲುಪಿದ್ದರು. ಸಭೆಯಲ್ಲಿ ಗಾಂಧೀಜಿ ಅವರು ಖಾದಿ ಕುರಿತು ಮಾತನಾಡಿದ್ದರು. ಸಭೆಯಲ್ಲಿ ನಿಧಿ ಸಂಗ್ರಹಿಸಲಾಗಿತ್ತು . ಇಲ್ಲಿಂದ ಅವರು ಬೇಲೂರಿಗೆ ತೆರಳಿದ್ದರು.

ಆಧಾರ: ‘ಗಾಂಧೀ ಮತ್ತು ಕರ್ನಾಟಕ ಪುಸ್ತಕ (ಅಧ್ಯಾಯ 3: ಖಾದಿ ಪ್ರಚಾರ ಪ್ರವಾಸ), ಸಂಪಾದಕ ಸಿದ್ದವನಹಳ್ಳಿ ಕೃಷ್ಣಶರ್ಮ.

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !