ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Ganesh Chaturthi: ಮೂರ್ತಿ ತಯಾರಿಕೆಯಲ್ಲಿ ಸಿದ್ಧಹಸ್ತ ಹೊಳೆಯಪ್ಪ

Published 5 ಸೆಪ್ಟೆಂಬರ್ 2024, 6:53 IST
Last Updated 5 ಸೆಪ್ಟೆಂಬರ್ 2024, 6:53 IST
ಅಕ್ಷರ ಗಾತ್ರ

ಕಡೂರು: ಗಣೇಶ ಹಬ್ಬ ಬಂದರೆ ಕಡೂರಿನವರಿಗೆ ನೆನಪಾಗುವುದು ಪಟ್ಟಣಗೆರೆಯ ಹೊಳೆಯಪ್ಪ. ನಾಲ್ಕು ದಶಕಗಳಿಂದ ಗಣಪತಿ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿರುವ ಇವರು ತಯಾರಿಸಿದ ಗಣಪತಿಗಳು ಬಹು ಪ್ರಸಿದ್ಧ.

ಕಡೂರಿನ ಸಾರ್ವಜನಿಕ ಗಣಪತಿಯನ್ನು ನಿರ್ಮಿಸುವುದು ಇವರೇ. ಈ ಬಾರಿ 37ನೇ ವರ್ಷದ, 10 ಅಡಿ ಎತ್ತರದ ಗಣಪತಿ ಮೂರ್ತಿಗೆ ಅಂತಿಮ ರೂಪ ನೀಡುವಲ್ಲಿ ಹೊಳೆಯಪ್ಪ ನಿರತರಾಗಿದ್ದಾರೆ. ಗಣೇಶ ಚತುರ್ಥಿಯಂದು ಮೂರ್ತಿ ಪ್ರತಿಷ್ಟಾಪನೆಯಾಗಲಿದೆ. ಇಲ್ಲಿನ  ಗಣಪತಿ ಒಂದೇ ಅಲ್ಲ,  ತಾಲ್ಲೂಕಿನ ಸುಮಾರು 40 ಕಡೆ ಸಾರ್ವಜನಿಕವಾಗಿ ಪ್ರತಿಷ್ಟಾಪಿಸಲಾಗುವ ಗಣಪತಿ ಮೂರ್ತಿಗಳ ತಯಾರಕರೂ ಇವರೇ...

ಮೂರ್ತಿ ತಯಾರಿಕೆಯಲ್ಲಿ ನಾಲ್ಕೂವರೆ ದಶಕಗಳ ಅನುಭವ ಇವರದು. ಗಣಪತಿ ಹಬ್ಬಕ್ಕೆ ಒಂದು ತಿಂಗಳಿರುವಾಗಲೇ ಮೂರ್ತಿ ತಯಾರಿಕೆಗೆ ಆರಂಭಿಸುತ್ತಾರೆ. ಮೂರ್ತಿ ತಯಾರಿಕೆಗೆ ಬೇಕಾದ ವಿಶೇಷ ಮಣ್ಣನ್ನು ನಿರ್ದಿಷ್ಟ ಕೆರೆಯಿಂದ ತರುತ್ತಾರೆ. ಪರಿಸರ ಸ್ನೇಹಿ ಬಣ್ಣ ಬಳಸುತ್ತಾರೆ. ಒಂಭತ್ತು ಇಂಚಿನಿಂದ ಆರು ಅಡಿ ಎತ್ತರದ ತನಕ ವಿವಿಧ ಗಾತ್ರದ ಗಣಪತಿಗಳು ಇವರ ಕೈಯಲ್ಲಿ ಅರಳಿವೆ.

ಅರ್ಧನಾರೀಶ್ವರನ ಮೇಲೆ ಕುಳಿತಿರುವ ಗಣಪತಿ, ಟಗರಿನ ಮೇಲೆ ಕುಳಿತ ಗಣಪ, ಬಾಹುಬಲಿ ಗಣಪ ಮುಂತಾದ ಗಣಪತಿಗಳು ಗಮನ ಸೆಳೆಯುತ್ತವೆ. ₹100ರಿಂದ ಆರಂಭಿಸಿ ₹20 ಸಾವಿರದ ತನಕ ಬೆಲೆಯುಳ್ಳ ಮೂರ್ತಿಗಳು ಇವರ ಬಳಿ ಲಭ್ಯವಿದೆ.

ಮೂಲತಃ ಕೃಷಿಕರಾದ ಹೊಳೆಯಪ್ಪ ಅವರ ಕುಟುಂಬಕ್ಕೆ  ಮೂರ್ತಿ ತಯಾರಿಕೆ ಉಪಕಸುಬು. ವರ್ಷದ ಎರಡು ತಿಂಗಳು ಮಾತ್ರ ಈ ಕಾರ್ಯ.ಮಿಕ್ಕಂತೆ ಕೃಷಿ ಬದುಕು ಎನ್ನುವ ಹೊಳೆಯಪ್ಪ ಅವರ ಕಾಯಕದಲ್ಲಿ ಅವರ ಮಕ್ಕಳಾದ ದೀಪಕ್ ಮತ್ತು ಕಾಂತರಾಜು ಕೈ ಜೋಡಿಸುತ್ತಾರೆ.

ಕಡೂರು ಸಾರ್ವಜನಿಕ ಗಣಪತಿ ಸಮಿತಿಯ ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಹೊಳೆಯಪ್ಪ
ಕಡೂರು ಸಾರ್ವಜನಿಕ ಗಣಪತಿ ಸಮಿತಿಯ ಗಣಪತಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವ ಹೊಳೆಯಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT