ನವದೆಹಲಿ: ದೆಹಲಿಯಲ್ಲಿ ₹89 ಕೋಟಿ ಮೌಲ್ಯದ ಜಮೀನನ್ನು ಕಾಂಗ್ರೆಸ್ನ ಹಿರಿಯ ನಾಯಕ, ನ್ಯಾಯವಾದಿ ಮತ್ತು ಕೇಂದ್ರ ಮಾಜಿ ಸಚಿವ ಕಪಿಲ್ ಸಿಬಲ್ ಕಡಿಮೆ ಬೆಲೆಗೆ ಖರೀದಿಸಿ ಅವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ನವದೆಹಲಿಯ ನಗರಸಭೆ ವ್ಯಾಪ್ತಿಯಲ್ಲಿರುವ ಈ ಭೂಮಿಯನ್ನು ಸಿಬಲ್ ಅವರು ₹1 ಲಕ್ಷಕ್ಕೆ ಖರೀದಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಡೈಲಿ ಮೆವರಿಕ್ ಎಂಬ ಪತ್ರಿಕೆ ವರದಿಯನ್ನು ಆಧಾರವಾಗಿರಿಸಿ ಸ್ಮೃತಿ ಈ ಆರೋಪ ಮಾಡಿದ್ದಾರೆ.