ಬುಧವಾರ, ಮೇ 18, 2022
24 °C
ಲಕ್ಷ್ಮೀನರಸಿಂಹ ಸ್ವಾಮಿ, ಶಾರದಾ ಪರಮೇಶ್ವರಿ ದೇವಸ್ಥಾನ

ಹರಿಹರಪುರ: ಮಹಾಕುಂಭಾಭಿಷೇಕ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪ: ತಾಲ್ಲೂಕಿನ ಹರಿಹರಪುರ ಮಠದಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ, ಶಾರದಾ ಪರಮೇಶ್ವರಿ ದೇವಸ್ಥಾನದಲ್ಲಿ ಏ.15ರಂದು ಮಹಾಕುಂಭಾಭಿಷೇಕ ನೆರವೇರಲಿದ್ದು, 24ರ ವರೆಗೆ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ.

ಏ.15ರಂದು ಸುಮುಹೂರ್ತದಲ್ಲಿ ದೇವತಾ ಪ್ರತಿಷ್ಠೆ, ಪ್ರತಿಷ್ಠಾಂಗ ಹೋಮ, ಪೂಜಾ ಹೋಮ, ಮಹಾಕುಂಭಾ ಭಿಷೇಕ ಮಹಾ ಮಂಗಳಾರತಿ ನೆರ ವೇರಲಿದೆ. ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರು ಮಹಾ ಕುಂಭಾಭಿಷೇಕ ನೆರವೇರಿಸಲಿದ್ದಾರೆ. ಸಂಜೆ 5.30ಕ್ಕೆ ವಿದ್ವಾನ್ ಸತ್ಯನಾರಾ ಯಣ ರಾಜು ಮತ್ತು ವೃಂದದಿಂದ ನೃತ್ಯರೂಪಕ ಆಯೋಜಿಸಲಾಗಿದೆ.

16ರಂದು ಲಕ್ಷ್ಮೀನರಸಿಂಹ ದೇವರಿಗೆ ಸಹಸ್ರನಾಮ ಪಾರಾಯಣದ ಮೂಲಕ ‘ಕೋಟಿ ತುಳಸಿ ಅರ್ಚನೆ’, ಲಕ್ಷ್ಮೀನರಸಿಂಹ ಮಹಾಯಾಗ ನಡೆಯಲಿದೆ. ಸಂಜೆ 5.30ಕ್ಕೆ ವಿದ್ವಾನ್ ಕುನ್ನಕುಡಿ ಎಂ.ಬಾಲಮುರಳಿಕೃಷ್ಣ ಮತ್ತು ವೃಂದದಿಂದ ಹಾಡುಗಾರಿಕೆ ಆಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.