ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸದಲ್ಲಿ ಧಾರಾಕಾರ ಮಳೆ

Last Updated 7 ಜುಲೈ 2018, 12:25 IST
ಅಕ್ಷರ ಗಾತ್ರ

ಕಳಸ: ಹೋಬಳಿಯಾದ್ಯಂತ ಶನಿವಾರ ಮುಂಜಾನೆಯಿಂದ ಧಾರಾಕಾರ ಮಳೆ ಸುರಿಯಿತು.

ಬೆಳಗಿನ ಜಾವ 3 ಗಂಟೆಯ ವೇಳೆಗೆ ಆರಂಭವಾದ ಮಳೆ 9 ಗಂಟೆಯವರೆಗೂ ಸತತವಾಗಿ ಸುರಿಯಿತು. ಆನಂತರ ಸ್ವಲ್ಪ ಕಾಲ ವಿರಾಮ ನೀಡಿದ ಮಳೆ ಮತ್ತೆ ದಿನವಿಡೀ ಸುರಿಯುತ್ತಲೇ ಇತ್ತು. ಸತತ ಮಳೆಯಿಂದ ಹೋಬಳಿಯ ಎಲ್ಲ ಜಲಮೂಲಗಳಲ್ಲೂ ಮತ್ತೆ ಜಲಸಮೃದ್ಧಿಯ ದೃಶ್ಯಗಳು ಕಂಡು ಬಂದವು.

ಭತ್ತದ ಗದ್ದೆಗಳಲ್ಲೆಲ್ಲಾ ನೀರು ತುಂಬಿ ರಮಣೀಯ ದೃಶ್ಯ ಸೃಷ್ಟಿಯಾಗಿತ್ತು. ತೋಟಗಳಲ್ಲಿ ಕೆಲಸಕ್ಕೆ ಮಳೆ ಅಡ್ಡಿ ತಂದಿತ್ತು. ಎಲ್ಲಡೆ ತೇವಾಂಶದಿಂದಾಗಿ ವಾತಾವರಣದ ತಾಪಮಾನ ಕುಗ್ಗಿತ್ತು. ಜನರು ಮನೆಯಿಂದ ಹೊರಬರಲು ಇಚ್ಛಿಸದೆ ಮನೆಯ ಒಳಗೇ ಉಳಿದರು. ವಾರಾಂತ್ಯಕ್ಕೆ ಕಳಸಕ್ಕೆ ಬಂದಿದ್ದ ಪ್ರವಾಸಿಗರು ಮಳೆಯಿಂದ ಫಜೀತಿಪಟ್ಟರು. ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆ ಸೇತುವೆಯು ಬೆಳಿಗ್ಗೆ ಕೆಲಕಾಲ ಭದ್ರೆಯ ಪ್ರವಾಹದಿಂದ ಆವೃತವಾಗಿತ್ತು. ಭದ್ರೆಯಲ್ಲಿ ದೊಡ್ಡ ಪ್ರಮಾಣದ ಕೆಂಪು ನೀರು ರೌದ್ರಭಾವ ಮೂಡಿಸುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT