ಕಡೂರು: ತಾಲ್ಲೂಕಿನ ಬೀರೂರು ಸಮೀಪದ ಹೊಗರೇಹಳ್ಳಿ ಗ್ರಾಮದಲ್ಲಿ ಲಕ್ಷ್ಮಿ ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು.

ರಥೋತ್ಸವದ ಅಂಗವಾಗಿ ಶುಕ್ರವಾರ ಹಾಗೂ ಶನಿವಾರ ಸಂಪ್ರದಾಯದಂತೆ ವಿವಿಧ ಧಾರ್ಮಿಕ ವಿಧಿಗಳು ನಡೆದವು. ಭಾನುವಾರ ದೇವಾಲಯದ ಮೂಲ ಮೂರ್ತಿಯ ಹೂವು ಮತ್ತು ಆಭರಣಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಶ್ರೀದೇವಿ- ಭೂದೇವಿ ಸಮೇತ ರಂಗನಾಥಸ್ವಾಮಿಯ ಉತ್ಸವ ಮೂರ್ತಿಯನ್ನು ರತ್ನಾಭರಣ, ಗಂಧ ಪುಷ್ಪಗಳೊಂದಿಗೆ ರಥಾರೋಹಣಕ್ಕಾಗಿ ಮಂಟಪಕ್ಕೆ ಕರೆ ತರಲಾಯಿತು.

ರಥೋತ್ಸವದಲ್ಲಿ ರಥದ ಮೊದಲನೆಯ ಮಂಗಳಾರತಿಯ ಪ್ರಧಾನ ಬಾವುಟ ಹರಾಜು ನಡೆಸಲಾಯಿತು. ಶಾಸಕ ಕೆ.ಎಸ್. ಆನಂದ್ ₹5.05 ಲಕ್ಷಕ್ಕೆ ಬಿಡ್ ಮಾಡಿ ತಮ್ಮದಾಗಿಸಿಕೊಂಡು ರಥದ ಪ್ರಥಮ ಪೂಜೆಗೆ ಭಾಜನರಾದರು.

ನಂತರ ಸುತ್ತಮುತ್ತಲಿನ ದೇವಾಲಯದವರ ಒಕ್ಕಲಿನ ಹೆಸರಿನಲ್ಲಿ ತೆಂಗಿನ ಕಾಯಿಯನ್ನು ಹಂಚಿಕೆ ಮಾಡಿ ರಥದ ಚಕ್ರಗಳಿಗೆ ಒಡೆದ ತಕ್ಷಣ, ಶ್ರೀಲಕ್ಷ್ಮೀ ರಂಗನಾಥ ಸ್ವಾಮಿ ಪಾದಕ್ಕೆ ಗೋವಿಂದಾ… ಗೋವಿಂದಾ ಎಂಬ ಘೋಷಗಳನ್ನು ಕೂಗುತ್ತಾ ರಥವನ್ನು ಎಳೆಯಲಾಯಿತು. ನೆರೆದಿದ್ದ ಭಕ್ತರು ಬಾಳೆ ಹಣ್ಣುಗಳನ್ನು ರಥದ ಕಳಸಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.

ಸಮೀಪದ ಆಸ್ಪತ್ರೆ ಆವರಣದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಶ್ರೀಕೃಷ್ಣ ಗಂಧೋತ್ಸವ ಮತ್ತು ನಾಣ್ಯಗಳಿಂದ ರಜತಾಭಿಷೇಕ ನಡೆಸಲಾಗಿದ್ದ ನಾಣ್ಯಗಳನ್ನು ಭಕ್ತರಿಗೆ ನೀಡಲಾಯಿತು. ರಥೋತ್ಸವದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಭದ್ರಾವತಿ, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

ಸಂಜೆ ನವಿಲೋತ್ಸವ, ಶೇಷವಾಹನೋತ್ಸವ ಸೋಮವಾರ ಅಶ್ವಾರೋಹಣೋತ್ಸವ, ಅವಭೃತ ಸ್ನಾನ, ವಸಂತ ಸೇವಾ ನಂತರ ಪೂಜೆ, ಹೋಮ, ನಿತ್ಯಬಲಿ ರಾತ್ರಿ ಉಯ್ಯಾಲೆ ಉತ್ಸವ, ಹನುಮಂತೋತ್ಸವ ನಡೆಯಲಿದೆ. ಮಂಗಳವಾರ ಗ್ರಾಮದ ಪ್ರದಕ್ಷಿಣೆ, ಅಡ್ಡಪಲ್ಲಕ್ಕಿ ಉತ್ಸವ, ಕೆಂಚರಾಯಸ್ವಾಮಿ, ಭೂತರಾಯಸ್ವಾಮಿ ಸೇವೆಯೊಂದಿಗೆ ರಥೋತ್ಸವ ಸಂಪನ್ನಗೊಳ್ಳಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-126-317478377

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.