ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಲದಾಳು ಗ್ರಾಮದ ಮನೆಯ ಬೀಗ ಮುರಿದು ಕಳ್ಳತನ ಮಾಡಿರುವ ಪ್ರಕರಣವನ್ನು ಭೇದಿಸಿರುವ ಕಡೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ₹30.13 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ.

ಮೈಸೂರು ಮೂಲದ ಫರಾಜ್, ಚಿಕ್ಕಮಗಳೂರು ತಾಲ್ಲೂಕು ಭಕ್ತರಹಳ್ಳಿಯ ಭೂದೇಶ್ ಬಂಧಿತರು.

ಇತ್ತೀಚೆಗೆ ಜಿಲ್ಲೆಯಾದ್ಯಂತ ಮನೆ ಕನ್ನ-ಕಳವು ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ತರೀಕೆರೆ ಡಿವೈಎಸ್ಪಿ ಎಚ್.ಪರಶುರಾಮಪ್ಪ ಮತ್ತು ಕಡೂರು ಇನ್ಸ್ಪೆಕ್ಟರ್ ರಫೀಕ್.ಎಂ. ನೇತೃತ್ವದಲ್ಲಿ ತಂಡಗಳನ್ನು ರಚಿಸಸಲಾಗಿತ್ತು.

ಮನೆ ಕಳ್ಳತನ ಪ್ರಕರಣಗಳ ಸಂಬಂಧ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಜಿಲ್ಲೆಯ ಸಖರಾಯಪಟ್ಟಣ, ತರೀಕೆರೆ, ಮೈಸೂರು, ಗದಗ, ಹುಬ್ಬಳ್ಳಿ, ಹಾಸನ ಜಿಲ್ಲೆಯು ಹಳೇಬೀಡು ಮುಂತಾದ ಕಡೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿಎಸ್ಐಗಳಾದ ಪವನ್ ಕುಮಾರ್ ಸಿ.ಸಿ, ಧನಂಜಯ್ ಡಿ.ಎಚ್, ವಿದ್ಯಾ ಕೆ.ಜೆ, ತಿಪ್ಪೇಶ್ ಡಿ.ವಿ, ಮಂಜುಳಾಬಾಯಿ, ಸಿಬ್ಬಂದಿ ಮಧುಕುಮಾರ್ ಜಿ.ಕೆ, ಸ್ವಾಮಿ ಎ.ಓ, ಹರೀಶ್ ಬಿ.ಸಿ, ಮಹಮ್ಮದ್ ರಿಯಾಜ್, ಧನಪಾಲನಾಯ್ಕ, ದೇವರಾಜ್ ಎ.ಎಸ್, ಅರುಣ್ ಕುಮಾರ್, ರಾಜಪ್ಪ ಬಿ.ಎಚ್, ಮಂಜಪ್ಪ, ಸಿದ್ದನಾಯ್ಕ, ವಸಂತ್ ಕುಮಾರ್, ನಜೀರ್, ಚಾಲಕರಾದ ಪುನೀತ್ ಹಾಗೂ ತಾಂತ್ರಿಕ ವಿಭಾಗದ ಅಂಜುಂ ನಯಾಜ್ , ಅಬ್ದುಲ್ ರಬ್ಬಾನಿ ತನಿಖಾ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.