ನಮೂನೆ 50, 53 ಮತ್ತು 57 ಅಡಿಯಲ್ಲಿ ಬಗರ್ ಹುಕುಂ ಸಾಗುಳಿದಾರರು ಸಲ್ಲಿಸುವ ಅರ್ಜಿಗಳನ್ನು ಈ ಸಮಿತಿ ಮುಂದೆ ಮಂಡಿಸುವುದು ಕಡ್ಡಾಯ. ಅದರೆ, ಈ ಸಮಿತಿಯ ಮುಂದೆ ಮಂಡನೆಯನ್ನೇ ಮಾಡದ 1,159 ಪ್ರಕರಣಗಳನ್ನು ತನಿಖಾ ತಂಡ ಗುರುತಿಸಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ 1,004 ಪ್ರಕರಣ, ಕಡೂರು ತಾಲ್ಲೂಕಿನಲ್ಲಿ 155 ಪ್ರಕರಣಗಳಿವೆ. ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿಯೇ ತಮಗೆ ಬೇಕಾದವರಿಗೆ ಸಾಗುವಳಿ ಚೀಟಿ ಮುದ್ರಿಸಿ ಕೊಟ್ಟಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ.