ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರು: ಮಲಿಯಮ್ಮದೇವಿ ದೇಗುಲ ಲೋಕಾರ್ಪಣೆ

ಜ. 23ರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮ ಆರಂಭ
Last Updated 21 ಜನವರಿ 2023, 6:43 IST
ಅಕ್ಷರ ಗಾತ್ರ

ಕಡೂರು: ಎರಡು ಶತಮಾನಗಳ ಇತಿಹಾಸವಿರುವ ದೊಡ್ಡಪೇಟೆಯ ಮಲಿಯಮ್ಮ ದೇವಿಯ ನೂತನ ದೇವಾ ಲಯದ ಲೋಕಾರ್ಪಣೆ ಮಹೋತ್ಸವವು ಜ.26ರಂದು ನಡೆಯಲಿದೆ ಎಂದು ದೇವಾಲಯದ ಗೌಡರಾದ ಕೆ.ಸಿ. ಸೋಮೇಶ್ ತಿಳಿಸಿದರು.

ಪಟ್ಣಣದ ದೇವಾಲಯದ ಆವರಣ ದಲ್ಲಿ ಶುಕ್ರವಾರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜ. 23ರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಚಾಲನೆಗೊಳ್ಳಲಿವೆ. ಅಂದು ಸಂಜೆ ವಿಶೇಷವಾಗಿ ಖಂಡುಗದಹಳ್ಳಿ ಸೋಮೇಶ್ವರ ಸ್ವಾಮಿ ಜೊತೆಯಲ್ಲಿ ಬೀದಿಬಸವೇಶ್ವರ ಸ್ವಾಮಿ, ಅಂಬ್ಲೇಹಳ್ಳಿ ಬೀರಲಿಂಗೇಶ್ವರ ಸ್ವಾಮಿ, ಏಳೂರು ಬೀರಲಿಂಗೇಶ್ವರ ಸ್ವಾಮಿ ಹಾಗೂ ಚೊಕ್ಕಾಪುರದ ಚೌಡೇಶ್ವರಿ ಗ್ರಾಮ ದೇವತೆಗಳ ಕೂಡು ಭೇಟಿ ನಡೆಯಲಿದೆ ಎಂದರು.

ಜ.24ರಂದು ವಕ್ಕಲುಗಳ ಮೀಸಲಗೂಡೆ ಉತ್ಸವ, ಸಂಜೆ ಪಟ್ಟಣದ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಿಂದ 108 ಪೂರ್ಣ ಕುಂಭಗಳ ಮೆರವಣಿಗೆ ನಂತರ ಅಗ್ರೋದಕ ಗಂಗಾಪೂಜೆಯೊಂದಿಗೆ ಕಾಮಧೇನು ಪೂಜೆ, ದೀಪಾರಾಧನೆ, ಮಹಾಗಣಪತಿ ಪೂಜೆಯೊಂದಿಗೆ ದೇವಾಲಯದಲ್ಲಿ ಪೂಜೆ ನಡೆಯಲಿವೆ. ಜ.25ರಂದು ಸಂಜೆ ಕನ್ನಿಕಾಪೂಜೆ, ದುರ್ಗಾಸಪ್ತಶತಿ ಪಾರಾಯಣ ಸಹಿತ ಚಂಡಿಕಾಹೋಮ, ಅಷ್ಟದಿಕ್ಪಾಲಕ ಹೋಮ, ಹಾಗೂ ದೇವಿಯ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ ಸಂಕಲ್ಪ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದರು.

26ರಂದು ಬೆಳಿಗ್ಗೆ 4 ರಿಂದ 6ರವರೆಗೆ ಗೋಪೂಜೆಯೊಂದಿಗೆ ಎಡೆಯೂರು ಮತ್ತು ತಾವರೆಕೆರೆ ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ಕಳಶಾರೋಹಣದೊಂದಿಗೆ ದೇವಾಲಯ ಲೋಕಾರ್ಪಣೆಯಾಗಲಿದೆ. ಕಡೂರಹಳ್ಳಿಯ ಕೀರ್ತಿಕುಮಾರ್ ಶಾಸ್ತ್ರಿ ತಂಡದವರಿಂದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಸುಮಾರು ₹ 1 ಕೋಟಿಗೂ ಅಧಿಕ ವೆಚ್ಚದಲ್ಲಿ ಸಂಪೂರ್ಣ ಕಲ್ಲಿನಿಂದ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ವಿವರ ನೀಡಿದರು.

ದೇವಾಲಯ ಸಮಿತಿಯ ಖಜಾಂಚಿ ಶೇಖರಪ್ಪ, ರಂಗಪ್ಪ, ಈರಳ್ಳಿ ರಮೇಶ್, ಕೆ.ಬಿ. ಮಂಜುನಾಥ್, ದೊಡ್ಡಿಬಿಂಗಿ ದೀಪು, ಕೆ.ಜಿ. ಲೋಕೇಶ್, ಅನಿಲ್, ಸೋಮಶೇಖರ್, ಸೋಮನಾಥ್, ಗೋವಿಂದಪ್ಪ, ಬಂಕ್‌ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT