ಭಾನುವಾರ, ಜನವರಿ 19, 2020
28 °C

ಶಿವಮೊಗ್ಗ ಜನಶತಾಬ್ದಿಗೆ ತರೀಕರೆ ನಿಲ್ದಾಣದಲ್ಲಿ ನಿಲುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Train

ಚಿಕ್ಕಮಗಳೂರು: ಯಶವಂತಪುರ–ಶಿವಮೊಗ್ಗ– ಯಶವಂತಪುರ (ಗಾಡಿ ಸಂಖ್ಯೆ12089/12090) ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ ಇದೇ 15ರಿಂದ ಜಿಲ್ಲೆಯ ತರೀಕೆರೆ ತಾಲ್ಲೂಕು ಕೇಂದ್ರದಲ್ಲಿ ಒಂದು ನಿಮಿಷ ನಿಲುಗಡೆ ಕಲ್ಪಿಸಲಾಗಿದೆ.

ಪ್ರಾಯೋಗಿಕವಾಗಿ ಇದೇ 15ರಿಂದ ಜುಲೈ 14ರವರೆಗೆ ಆರು ತಿಂಗಳು ಈ ಸೌಲಭ್ಯ ಕಲ್ಪಿಸಲಾಗಿದೆ.

ಯಶವಂತಪುರ –ಶಿವಮೊಗ್ಗ (12089) ರೈಲು ರಾತ್ರಿ 9.02ಕ್ಕೆ ತರೀಕೆರೆ ನಿಲ್ದಾಣ ತಲುಪಿ 9.03ಕ್ಕೆ ಹೊರಡಲಿದೆ.

ಶಿವಮೊಗ್ಗ–ಯಶವಂತಪುರ (12090) ರೈಲು ಬೆಳಿಗ್ಗೆ 6.04ಕ್ಕೆ ತರೀಕೆರೆ ನಿಲ್ದಾಣ ತಲುಪಿ 6.05ಕ್ಕೆ ಹೊರಡಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು