ಜಯಪುರ (ಬಾಳೆಹೊನ್ನೂರು): ಪಟ್ಟಣದ ಶೃಂಗೇರಿ ರಸ್ತೆಯ ಪೆಟ್ರೋಲ್ ಬಂಕ್ ಬಳಿ ರೋಟರಿ ಚಾರಿಟಬಲ್ ಟ್ರಸ್ಟ್ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಮೂರು ದಿನ ಆಯೋಜಿಸಿದ್ದ ಜಯಪುರ ಉತ್ಸವ ರಂಜಿಸಿತು.

ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಜನ ಭಾಗವಹಿಸಿದ್ದರು. ವಿವಿಧ ಖಾದ್ಯಗಳಲ್ಲಿ ಸವಿದರು. ಉಡುಪಿಯ ಜಾನಪದ ಕಲೆಗಳ ಅನಾವರಣದ ಕಲಾಮಯಂ, ಗಿಚ್ಚಿ ಗಿಲಿಗಿಲಿ ತಂಡದ ಸಾಂಸ್ಕೃತಿಕ ಕಾರ್ಯಕ್ರಮ, ಝೇಂಕಾರ್ ಮೆಲೋಡಿಸ್ ಅವರ ರಸಮಂಜರಿ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಚಾಲನೆ ನೀಡಿದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವೇಗದ ಕಾಲಘಟ್ಟದ ಬದುಕಿನ ಜಂಜಾಟದಲ್ಲಿ ಸ್ವಲ್ಪ ಸಮಯವನ್ನು ಸಂಗೀತ, ಕಲೆ, ಮನರಂಜನೆ ಆಸ್ವಾದಿಸಲು ಮೀಸಲಿ ಟ್ಟಾಗ ಮನಃಶಾಂತಿ ದೊರೆಯುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ರೋಟರಿ ಸಂಸ್ಥೆ ಶ್ಲಾಘನೀಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಜಯಪುರ ಪಟ್ಟಣದ ರಸ್ತೆ ವಿಸ್ತರಣೆ ಭರದಿಂದ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರು, ಬೀದಿ ದೀಪ, ಪಾದಚಾರಿ ಮಾರ್ಗವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ಪಟ್ಟಣದ ರಸ್ತೆ ಅಭಿವೃದ್ದಿಗೆ ಶಾಸಕರು ₹ 5 ಕೋಟಿ ಬಿಡುಗಡೆ ಮಾಡಿದ್ದು ಮುಂದಿನ ದಿನಗಳಲ್ಲಿ ರೋಟರಿ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.

ರೋಟರಿ ಚಾರಿಟಬಲ್ ಅಧ್ಯಕ್ಷ ಎಂ.ಜೆ.ಪ್ರದೀಪ್, ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ಬಿ.ಶೆಟ್ಟಿ, ಎಚ್.ಪಿ.ಕಾರ್ತಿಕ್, ಮೋಹನ್ ಕಾರಂತ್, ಉದ್ಯಮಿ ರಂಜಿತ್, ಡಾ.ನವೀನ್ ಲಾಯ್ಡ್ ಮಿಸ್ಕಿತ್, ಕೆ.ಆರ್.ಶ್ರೀಕರ ಕೋಣಂಬಿ, ಗುಡ್ಡದ ಬಂಗ್ಲೆ ಪ್ರದೀಪ್ ಹೆಗ್ಗಡೆ, ಜೆ.ಆರ್.ನಾಗಭೂಷಣ್, ಎಚ್.ವಿ.ಮಂಜುನಾಥ್, ಡಿ.ಬಿ.ರಾಜೇಂದ್ರ, ಗೋಪಾಲಕೃಷ್ಣ, ಬಿ.ಎಂ.ಸುದೇವ್, ಎ.ಸಿ.ಸಂತೋಷ್ ಆರೇನೂರು, ಅಲೆನ್ ಆರೇನ್ನಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-126-1669928418

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.