ಜಯಪುರ(ಬಾಳೆಹೊನ್ನೂರು): ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆ ನಡೆಯುತ್ತಿದ್ದು, ವರ್ತಕರು ಪಾದಚಾರಿ ಮಾರ್ಗದ ಮೇಲೆ ಕಟ್ಟಡ ಕಟ್ಟುತ್ತಿದ್ದು ಅದನ್ನು ತೆರವುಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಅನಿಲ್ ಡಿಮೇಲ್ಲೋ ಜಯಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಮುಖ್ಯ ರಸ್ತೆಯ ಮಧ್ಯಭಾಗದಿಂದ 33 ಅಡಿ ರಸ್ತೆ ವಿಸ್ತರಣೆಗೆ ಆರಂಭದಲ್ಲಿ ತೀರ್ಮಾನಿಸಲಾಗಿದ್ದರೂ ಪರೋಕ್ಷವಾಗಿ ಒತ್ತಡಕ್ಕೆ ಮಣಿದು ಇದೀಗ 30 ಅಡಿ ವಿಸ್ತರಣೆ ನಡೆಯುತ್ತಿದೆ. 2026 ಜ. 16ರಂದು ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾದಚಾರಿ ರಸ್ತೆಯ ಮೇಲೆ ಕಟ್ಟಡದ ಚಾವಣಿ ರಚನೆ ಮಾಡದಂತೆ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಪಟ್ಟಣದ ವರ್ತಕರು ಪಾದಚಾರಿ ಮಾರ್ಗದ ಮೇಲೆಯೇ ಕಟ್ಟಡ, ಚಾವಣಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತಿರುಗಾಡಲು ಕಷ್ಟವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲರೂ ರಸ್ತೆಯಲ್ಲೇ ಓಡಾಟ ಮಾಡಬೇಕಾದ ಸ್ಥಿತಿ ಉದ್ಭವಿಸಲಿದೆ ಎಂದರು.

ವಿದ್ಯುತ್ ಕಂಬಗಳನ್ನು ಪಾದಚಾರಿ ಮಾರ್ಗದ ಹೊರಭಾಗದಲ್ಲಿ ಅಳವಡಿಸಲಾಗುತ್ತದೆ. ಆದರೆ, ಈಗ ವಿದ್ಯುತ್ ಕಂಬಗಳನ್ನು ಮುಖ್ಯ ರಸ್ತೆಯ ಪಕ್ಕಕ್ಕೆ ಅಳವಡಿಸಲು ಕೆಲವರು ಒತ್ತಾಯಿಸಿರುವುದು ಅವೈಜ್ಞಾನಿಕವಾಗಿದೆ. ಒತ್ತಡಕ್ಕೆ ಮಣಿದು ಅವೈಜ್ಞಾನಿಕ ಕಾಮಗಾರಿಗೆ ಇಲಾಖೆ ಮುಂದಾದರೆ ಕಾನೂನಿನ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-126-1886828642

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.