ಶೃಂಗೇರಿ: ‘ವಿದ್ಯಾರ್ಥಿಗಳಿಗೆ ಸ್ನೇಹ ಸೌಹಾರ್ದದಿಂದ ಜೀವನ ನಡೆಸುವ ವಾಸ್ತವತೆಯನ್ನು ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವು ಕಲಿಸುತ್ತದೆ’ ಎಂದು ಶಾರದಾ ಪೀಠದ ಅಧಿಕಾರಿ ಸತೀಶ್ ಭಟ್ ಹೇಳಿದರು.

ಶೃಂಗೇರಿಯ ಮರ್ಕಲ್ ಗ್ರಾಮ ಪಂಚಾಯಿತಿಯ ಕಿಗ್ಗಾದ ಶ್ರೀಅಭಿನವ ರಾಮಾನಂದ ಸರಸ್ವತಿ ಪ್ರೌಢಶಾಲೆಯಲ್ಲಿ ಜೆ.ಸಿ.ಬಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಯುವಜನರು ಶಿಸ್ತುಬದ್ಧ ಜೀವನ, ಒಗ್ಗಟ್ಟಿನ ಅಗತ್ಯತೆ ಸೇರಿದಂತೆ ಅನೇಕ ವಿಚಾರವನ್ನು ಶಿಬಿರದಿಂದ ಕಲಿಯಬಹುದಾಗಿದೆ’ ಎಂದರು.

ಪ್ರಾಂಶುಪಾಲರಾದ ಎಂ.ಸ್ವಾಮಿ ಮಾತನಾಡಿ, ‘ಶಿಬಿರವು ವಿದ್ಯಾರ್ಥಿಗಳಿಗೆ ಹೊಸತನ ನೀಡುತ್ತದೆ. ಒಂದಷ್ಟು ದಿನ ಮೊಬೈಲ್ ಫೋನ್ನಿಂದ ದೂರವಿದ್ದು, ಜೀವನವಿಡಿ ನೆನಪಿಸಿಕೊಳ್ಳುವ ಘಟನೆಯನ್ನು ಇಲ್ಲಿಂದ ಪಡೆಯುವಿರಿ’ ಎಂದರು.

ಕಾಲೇಜಿನ ಹಿರಿಯ ವಿದ್ಯಾರ್ಥಿ ಕೃಷ್ಣಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಬಹುಮಾನ ವಿತರಿಸಲಾಯಿತು. ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಸ್ಪರ್ಶ, ನಾಗಶ್ರೀ, ಅಮೃತ, ವರ್ಷ, ಚಂದನ, ಆಪ್ತಿ ಸಹಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜು ಆಡಳಿತ ಮಂಡಳಿಯ ಪುಷ್ಪಾ ಲಕ್ಷ್ಮೀನಾರಾಯಣ, ಕೆ.ಎಂ. ಮಂಜುನಾಥ್, ಕೆ.ಎಂ. ಶ್ರೀನಿವಾಸ್, ತ್ಯಾಗರಾಜ್ ರಾವ್, ಕಿಗ್ಗಾ ದೇವಸ್ಥಾನದ ಮಂಜುನಾಥ್, ಸ್ವಾಗತ ಸಮಿತಿಯ ಪದಾಧಿಕಾರಿ ಎ.ಎಸ್. ನಯನ, ನೂತನ ಕುಮಾರ್, ವಿಠಲ್, ಶಿಬಿರಾಧಿಕಾರಿಗಳಾದ ಎ.ಜಿ. ಪ್ರಶಾಂತ್, ಸಂತೋಷ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.