ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಶಾಲೆ ಮುಂಭಾಗ ವಾಲಿದ ವಿದ್ಯುತ್ ಕಂಬಗಳು: ಅಪಾಯಕ್ಕೆ ಆಹ್ವಾನ

ಜ್ಯೋತಿನಗರದ ಸಂತ ಜೋಸೆಫರ ಶಾಲೆ ಮುಂಭಾಗ
Last Updated 3 ಡಿಸೆಂಬರ್ 2022, 8:36 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ 24ನೇ ವಾರ್ಡ್‌ನಲ್ಲಿ ಜ್ಯೋತಿನಗರದ ಸಂತ ಜೋಸೆಫರ ಶಾಲೆ ಮುಂಭಾಗದ ಹೆದ್ದಾರಿ ಬದಿ ಅಳವಡಿಸಿರುವ ವಿದ್ಯುತ್‌ ಮಾರ್ಗದ ಕಂಬಗಳು ವಾಲಿವೆ, ದಂಟರಮಕ್ಕಿ ವೃತ್ತದಿಂದ ಶತಮಾನೋತ್ಸವ ಕ್ರೀಡಾಂಗಣ ಕಡೆಗೆ ಸಾಗುವ ರಸ್ತೆ ಬದಿಯಲ್ಲಿ ಅಲ್ಲಲ್ಲಿ ಕಸ ರಾಶಿ ಬಿದ್ದಿದೆ.

ಜ್ಯೋತಿನಗರದ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌173) ಬದಿಯಲ್ಲಿ ಕಂಬಗಳನ್ನು ಅಳವಡಿಸಲಾಗಿದೆ. ಕಾಂಕ್ರೀಟ್‌ ಹಾಕಿಲ್ಲ, ವಿದ್ಯುತ್ ಕಂಬಗಳು ವಾಲಿವೆ. ಕುಪ್ಪೇನಹಳ್ಳಿ ಸನಿಹ ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಕಡೆಗೆ ಒಂದು ಲೈನ್‌ ಹಾದುಹೋಗಿದೆ. ವಿದ್ಯುತ್‌ ತಂತಿಗಳ ಅಡಿಯಲ್ಲಿ ರಕ್ಷಾ ಕವಚವನ್ನು ಅಳವಡಿಸಿಲ್ಲ.
ಕುಪ್ಪೇನಹಳ್ಳಿ, ಜ್ಯೋತಿನಗರದ ಹಲವೆಡೆ ವಿದ್ಯುತ್ ದೀಪಗಳು ಹಾಳಾಗಿವೆ. ಈವರೆಗೆ ಅಳವಡಿಸಿಲ್ಲ. ಕೆಲವಡೆ ವಿದ್ಯುತ್‌ ಕಂಬಗಳು ಬಾಗಿವೆ.

ಜ್ಯೋತಿನಗರದ ಪ್ಲಾಂಟರ್ಸ್‌ ಪಾರ್ಕ್‌ ಬ್ಯಾಡ್ಮಿಂಟನ್‌ ಅಕಾಡೆಮಿ ಮುಂದೆ ಇರುವ ಪಾರ್ಕ್‌ ಹದಗೆಟ್ಟಿದೆ. ಗೇಟ್ ಇಲ್ಲ. ಬಿಡಾಡಿಗಳ ಪ್ರಾಣಿಗಳ ಆಶ್ರಯ ತಾಣವಾಗಿದೆ. ಕೆಲ ತಿಂಗಳುಗಳಿಂದ ಮಣ್ಣು ಮಿಶ್ರಿತ ನೀರು ನಳಗಳಲ್ಲಿ ಪೂರೈಕೆಯಾಗುತ್ತದೆ. ನಳಗಳ ನೀರು ಹಾಕಿಡುವ ತೊಟ್ಟಿ, ಡ್ರಮ್ಮು, ಪಾತ್ರೆಗಳ ತಳದಲ್ಲಿ ಮಣ್ಣು, ಕೊಳೆ ಇರುತ್ತದೆ. ಸಂಬಂಧಪಟ್ಟವರಿಗೆ ತಿಳಿಸಿದರೂ ಗಮನಹರಿಸಿಲ್ಲ ಎಂದು ಕುಪ್ಪೇನಹಳ್ಳಿಯ ನಿವಾನಿ ಪಲ್ಲವಿ ಅಳಲು ತೋಡಿಕೊಂಡರು.

ವಾರ್ಡ್‌ನ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದುಕೊಂಡಿವೆ. ಕೆಲವೆಡೆ ಕಸದ ರಾಶಿ ಬಿದ್ದಿದೆ. ಶತಮಾನೋತ್ಸವ ಕ್ರೀಡಾಂಗಣ ಭಾಗದಲ್ಲಿ ಹಂದಿಗಳ ಹಾವಳಿ ಇದೆ. ಎಪಿಎಂಸಿ ಪ್ರಾಂಗಣ ಪ್ರವೇಶ ದ್ವಾರದ ಸನಿಹದ ಶೌಚಾಲಯ ಪಾಳು ಬಿದ್ದಿದೆ.

ವಾರ್ಡ್‌ನ ಕೆಲವೆಡೆ ಚರಂಡಿಗಳು ದುಃಸ್ಥಿತಿಯಲ್ಲಿವೆ. ಅಮೃತ್‌ ಯೋಜನೆಯಡಿ ಪೈಪ್‌ಗಳನ್ನು ಅಳವಡಿಸಲಾಗಿದೆ. ಕೆಲವೆಡೆ ಇನ್ನೂ ನಳ ಸಂಪರ್ಕ ಕಲ್ಪಿಸಿಲ್ಲ. ಯೋಜನೆಗೆ ಕಾಮಗಾರಿಗೆ ಕೆಲವೆಡೆ ರಸ್ತೆ ಅಗೆದು ಸರಿಯಾಗಿ ಮುಚ್ಚದ ಪರಿಣಾಮ ತಗ್ಗುಗಳಾಗಿವೆ. ಹಲವೆಡೆ ರಸ್ತೆಗಳು ಹದಗೆಟ್ಟಿವೆ.

ಸಂತ ಜೋಸೆಫರ ಶಾಲೆ ಮುಂಭಾಗದ ಹೆದ್ದಾರಿ ಬದಿ ವಿದ್ಯುತ್‌ ಕಂಬಗಳು ವಾಲಿವೆ. ಅವು ಉರುಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಾಂಕ್ರಿಟ್‌ ಹಾಕಿ ಕಂಬ ಅಳವಡಿಸುವಂತೆ ಮನವಿ ಮಾಡಿದರೂ ಗಮನ ಹರಿಸಿಲ್ಲ. ಒಂದು ಕಂಬಕ್ಕೂ ಬಲ್ಬ್‌ ಅಳವಡಿಸಿಲ್ಲ ಎಂದು ಜ್ಯೋತಿನಗರ ನಿವಾಸಿ ಸತೀಶ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT