ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು: 309 ಎಕರೆ ಅರಣ್ಯ ಒತ್ತುವರಿ

ಕಡೂರು ತಾಲ್ಲೂಕಿನಲ್ಲಿ 118 ಎಫ್‌ಐಆರ್
Published 23 ಆಗಸ್ಟ್ 2024, 5:25 IST
Last Updated 23 ಆಗಸ್ಟ್ 2024, 5:25 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕು ವ್ಯಾಪ್ತಿಯಲ್ಲಿ 309 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು,  118 ಎಫ್ಐಆರ್ ದಾಖಲಾಗಿದೆ. ಎಮ್ಮೆದೊಡ್ಡಿ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಒತ್ತುವರಿ ಆಗಿದೆ.

ಕೆಲವು ದಿನಗಳ ಹಿಂದೆ ಅಧಿಕಾರಿಯೊಬ್ಬರು 10 ಎಕರೆ ಅರಣ್ಯ ಜಮೀನು ಅಕ್ರಮಿಸಿಕೊಂಡು ಅಲ್ಲಿ ಮನೆ, ಕೊಳ, ಕುರಿ ಸಾಕಾಣಿಕೆ ಶೆಡ್ ನಿರ್ಮಿಸಿಕೊಂಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಎಲ್ಲವನ್ನು ತೆರವುಗೊಳಿಸಿ 4 ಎಕೆರೆ ವಶಕ್ಕೆ ಪಡೆದಿದ್ದರು.

ಅರಣ್ಯ ಇಲಾಖೆಯ ಒತ್ತುವರಿ ತೆರವು ಕಾರ್ಯಾಚರಣೆ ಮೊದಲ ಹಂತದಲ್ಲಿ 30 ಎಕರೆಗಿಂತ ಹೆಚ್ಚು ಒತ್ತುವರಿ, ಎರಡನೇ ಹಂತದಲ್ಲಿ 10 ಎಕರೆ ಮತ್ತು ಮೂರನೇ ಹಂತದಲ್ಲಿ 5 ಎಕರೆಗಿಂತ ಹೆಚ್ಚಿನ ಒತ್ತುವರಿ ತೆರವುಗೊಳಿಸುವ ಕಾರ್ಯಸೂಚಿಯಿದೆ.

ಕಡೂರು ಪಟ್ಟಣಕ್ಕೆ ಸ್ವಲ್ಪ ದೂರದಲ್ಲಿ ರಾಜ್ಯ ಹೆದ್ದಾರಿ ಪಕ್ಕದಲ್ಲೆ ಅರಣ್ಯ ಇಲಾಖೆಯ 24 ಹೆಕ್ಟೇರ್ ಜಾಗ ಇದೆ. ಈ ಜಾಗ ಬಹುತೇಕ ಒತ್ತುವರಿಯಾಗಿದೆ. ಈ ಜಾಗವನ್ನು ತೆರವುಗೊಳಿಸುವ ಕಾರ್ಯವಾಗಿಲ್ಲ.

ಅರಣ್ಯ ಇಲಾಖೆ ಒತ್ತುವರಿ ಗುರುತಿಸಿರುವ ಪಟ್ಟಿಯಲ್ಲಿ ಈ ಜಾಗದ ಪ್ರಸ್ತಾಪವೇ ಇಲ್ಲ. ಈ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂಬ ಮಾಹಿತಿ ಇಲಾಖೆಗೇ ಇಲ್ಲ. ಈ ಜಾಗದಲ್ಲಿ ಒತ್ತುವರಿ ಮಾಡಿದ್ದ ಕೆಲವರು ಜಾಗವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ.

ಖರೀದಿ ಮಾಡಿದವರು ಯಾವ ಆಧಾರದ ಮೇಲೆ ಖರೀದಿಸಿದ್ದಾರೆ ಎಂಬುದೇ ಅರ್ಥವಾಗದ ವಿಚಾರ. ಅಲ್ಲಿ ಅಡಿಕೆ ಗಿಡಗಳನ್ನು ಬೆಳೆದಿದ್ದಾರೆ. ಕೊಳವೆ ಬಾವಿಗಳನ್ನು ಕೊರೆಸಿ ವಿದ್ಯುತ್ ಸಂಪರ್ಕವನ್ನೂ ಪಡೆದಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಕಡೂರು ಅರಣ್ಯ ವಲಯದಲ್ಲಿರುವ ಇಡೀ ಅರಣ್ಯ ಭೂಮಿಯನ್ನು ಸರ್ವೆ ಮಾಡಿಸಿ, ಒತ್ತುವರಿ ಪ್ರಮಾಣ ಗುರುತಿಸಿ ಅದನ್ನು ತೆರವುಗೊಳಿಸುವ ಕಾರ್ಯವಾಗಬೇಕು ಎಂಬುದು ಸ್ಥಳೀಯರ ಒತ್ತಾಯ.

ಒತ್ತುವರಿ ಪ್ರಮಾಣ ಗುರುತಿಸಲಾಗಿದೆ ಯಾವುದೇ ಅರಣ್ಯ ಭೂಮಿ ಬಿಟ್ಟಿದ್ದರೆ ಮತ್ತೊಮ್ಮೆ ಪರಿಶೀಲಿಸಲಾಗುವುದು
ಮೋಹನ್ ನಾಯ್ಕ ಎಸಿಎಫ್ ಚಿಕ್ಕಮಗಳೂರು
ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯವನ್ನು ನಿಯಮಾನುಸಾರ ಮಾಡಲಾಗುತ್ತದೆ.
ಹರೀಶ್ ವಲಯ ಅರಣ್ಯಾಧಿಕಾರಿ

ಎಫ್.ಐ.ಆರ್‌. ದಾಖಲೆ ವಿವರ ಪ್ರದೇಶ;

ಪ್ರಕರಣ; ವಿಸ್ತೀರ್ಣ ಎಮ್ಮೆದೊಡ್ಡಿ; 58;178.20 ಎಕರೆ ಸಖರಾಯಪಟ್ಟಣ; 24; 46.3 ಎಕರೆ ಯಗಟಿ; 18; 58.19 ಎಕರೆ ಬೀರೂರು; 13; 22.29 ಎಕರೆ ತಂಗಲಿ ಮತ್ತು ಸಿಂಗಟಗೆರೆ; 5 ; 10 ಎಕರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT