ಕಡೂರು: ‘ಕಾಲ ಬದಲಾದರೂ ಜನಪದದ ಮೌಲ್ಯಗಳು ಎಂದಿಗೂ ಬದಲಾಗುವುದಿಲ್ಲ, ಕರ್ನಾಟಕದ ನೆಲದ ಮಣ್ಣಿಗೂ ಜನಪದ ಕಲೆ ಹಾಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧ ಇಂದಿಗೂ ಉಳಿದಿದೆ’ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಸ್.ಬಾಲಾಜಿ ಅಭಿಪ್ರಾಯಪಟ್ಟರು.

ಚಿಕ್ಕಬಾಸೂರು ಗ್ರಾಮದಲ್ಲಿ ಕನ್ನಡ ಜಾನಪದ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಕನ್ನಡ ಜಾನಪದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಸೊಗಡು ಉಳಿದಿರುವುದು ಜಾನಪದದಿಂದ. ಜನಪದರು ಮೂಲೆ ಗುಂಪಾದರೆ ನಾಡು ಕೂಡ ಮೂಲೆ ಗುಂಪಾಗಲಿದೆ. ಯಾವುದೇ ಧರ್ಮ, ಬಣ್ಣ, ಜಾತಿಯಿಲ್ಲದ ಮಾನವೀಯ ಮೌಲ್ಯಗಳ ಪರಿಚಯಿಸುವ ಕಲೆಯಾದ ಜಾನಪದವು ಚಿರಂತನ. ಯಾಂತ್ರೀಕೃತ ಬದುಕಿನಲ್ಲಿ ನಮ್ಮ ಪೂರ್ವಿಕರ ಕಲೆಗಳು ನಶಿಸುತ್ತವೆ ಎಂಬುದು ತಪ್ಪು ಕಲ್ಪನೆ. ಕಲೆಗಳು ಜೀವಂತಿಕೆಯನ್ನು ಉಳಿಸಲು ಪರಿವರ್ತನೆಗೊಳ್ಳುತ್ತವೆಯೇ ಹೊರತು ಎಂದಿಗೂ ನಶಿಸುವುದಿಲ್ಲ. ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಶೇ 10ರಷ್ಟು ಜಾನಪದ ಕಲಾವಿದರಿಗೆ ಮಾಸಾಶನ ನೀಡುತ್ತಿದೆ. ಉಳಿದ ಶೇ 90ರಷ್ಟು ಕಲಾವಿದರನ್ನು ಗುರುತಿಸುವಿಕೆಯ ಸಮೀಕ್ಷೆಯನ್ನು ಜಾನಪದ ಪರಿಷತ್ ಘಟಕ ರಾಜ್ಯದಾದ್ಯಂತ ನಡೆಸಲು ತೀರ್ಮಾನಿಸಿದೆ. ಕಲಾವಿದರಿಗೆ ನೀಡುವ ಮಾಸಾಶನವನ್ನು ಕನಿಷ್ಠ ₹5 ಸಾವಿರ ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.

‘ಗ್ರಾಮೀಣ ಸೊಗಡಿನ ಜಾನಪದ ಕಲೆಗಳನ್ನು ನಗರ ಪ್ರದೇಶಗಳಲ್ಲಿ ಕಾಣಲು ಸಾಧ್ಯವಿಲ್ಲವಾಗಿದೆ. ಒತ್ತಡದ ಜೀವನದಲ್ಲಿ ಸಿಲುಕಿ ಸಂಬಂಧಗಳ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ದುರಾದೃಷ್ಟಕರ ಸಂಗತಿ. ನಮ್ಮ ಪೂರ್ವಜರು ಪ್ರತಿಯೊಂದು ಕಾರ್ಯವನ್ನೂ ವೈಜ್ಞಾನಿಕ ದೃಷ್ಟಿಯಲ್ಲಿಯೇ ಮಾಡುತ್ತಿದ್ದರು. ಯುವಪೀಳಿಗೆಯೂ ಜಾನಪದ ಕಲೆಗಳ ಅರಿವಿಗೆ ಹೆಚ್ಚು ಒತ್ತುಕೊಡಬೇಕಿದೆ’ ಎಂದು ಚಿತ್ರನಟ ಕಡೂರು ಧರ್ಮಣ್ಣ ಹೇಳಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ಈ ಹಿಂದೆ ಪೂರ್ವಿಕರು ಜಾನಪದ ಕಲೆಗಳ ಮೂಲಕವೇ ಆರೋಗ್ಯಕರ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿ, ನಾಡಿಗೆ ಅಪಾರ ಕೊಡುಗೆ ನೀಡಿದ್ದರು. ಆದರೆ, ಈಗ ಕಾಲದ ಒತ್ತಡಕ್ಕೆ ಸಿಲುಕಿ ಶ್ರಮದ ಕಲೆಯನ್ನು ಕ್ಷೀಣಿಸಿದ್ದೇವೆ. ಜಾನಪದವು ನಮ್ಮ ಉಸಿರಾಗಿರಲು ಪ್ರಾಚೀನ ಸಂಸ್ಕೃತಿಗಳನ್ನು ಉಳಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಜೆ. ತಿಮ್ಮಯ್ಯ ಮಾತನಾಡಿ, ಪರಿಷತ್ ಮೂಲಕ ಪ್ರಥಮ ಬಾರಿಗೆ ತಾಲ್ಲೂಕು ಸಮ್ಮೇಳನ ಆಯೋಜಿಸಲಾಗಿದೆ. ಜಾನಪದ ಕಲಾವಿದರನ್ನು ಗುರುತಿಸುವ ಕಾರ್ಯವನ್ನು ತಾಲ್ಲೂಕು ಘಟಕ ನಿರಂತರ ಮಾಡುವ ಮೂಲಕ ತಾಲ್ಲೂಕಿನಾದ್ಯಂತ ಸಂಘಟನೆಗೆ ಒತ್ತು ಕೊಡಲಾಗುತ್ತದೆ ಎಂದರು.

ಸಮ್ಮೇಳನಾಧ್ಯಕ್ಷ ಎಂ.ಸಿ. ಭೋಗಪ್ಪ ಅವರನ್ನು ಅಲಂಕೃತ ಗಾಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ, ವಿವಿಧ ಕಲಾತಂಡದೊಂದಿಗೆ ಮೆರವಣಿಗೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಮರ್ಪಣೆ, ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್. ವಿಶಾಲಾಕ್ಷಮ್ಮ, ತಾಲ್ಲೂಕು ಘಟಕದ ಅಧ್ಯಕ್ಷೆ ಶೋಭಾ ಶ್ರೀನಿವಾಸ್, ಯುಗಧರ್ಮ ರಾಮಣ್ಣ, ಎಸ್.ಎಸ್. ವೆಂಕಟೇಶ್, ಚಿಕ್ಕನಲ್ಲೂರು ಪರಮೇಶ್, ಪ್ರೊ. ಕೆ.ಎಸ್. ಕೌಜಲಗಿ, ಜಾನಪದ ಪರಿಷತ್ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ. ಗಿರೀಶ್, ಖಜಾಂಚಿ ಸಿ.ಎಚ್. ಅನಂತ, ಕೆ.ಜಿ. ವಸಂತಕುಮಾರ್, ಆರ್.ಬಿ. ಮಂಜುನಾಥ್, ನಾಗರಾಜಪ್ಪ, ಹಿರಿಯ ಜಾನಪದ ಕಲಾವಿದೆ ಚೌಡಮ್ಮ ಇದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಮರ್ಪಣೆ ನಾಡಿಗೆ ಹಿರಿಯರ ಕೊಡುಗೆ ಅಪಾರ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ

ಕಲೆಗೆ ಸರ್ಕಾರದ ಪ್ರೋತ್ಸಾಹ ಅಗತ್ಯ ‘ಜಾನಪದ ಕಲೆಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕಿದೆ. ಜಿಲ್ಲೆಯಲ್ಲಿರುವ 4500ಕ್ಕೂ ಹೆಚ್ಚು ಕಲಾವಿದರನ್ನು ಗುರುತಿಸುವ ಕಾರ್ಯವನ್ನು ಪರಿಷತ್ನಿಂದ ಮಾಡಲಾಗಿದೆ. ಮಕ್ಕಳ ಶೈಕ್ಷಣಿಕ ಪಠ್ಯದಲ್ಲಿ ಜಾನಪದದ ಮೌಲ್ಯಗಳು ಮಾಯವಾಗಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೂ ಜಾನಪದದ ಕಲೆಯ ಪ್ರಕಾರಗಳನ್ನು ತಿಳಿಸಲು ಶಿಕ್ಷಣದ ವ್ಯವಸ್ಥೆಯಲ್ಲಿ ಪಠ್ಯದ ರೂಪದಲ್ಲಿ ಪರಿಚಯಿಸಿಕೊಡುವ ಕಾರ್ಯವಾಗಬೇಕಿದೆ’ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಓಣಿತೋಟ ರತ್ನಾಕರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.