ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದಗದಕೆರೆ ಬಿರುಕು ಉಂಟಾಗಿಲ್ಲ’

ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಸಿ. ಮಂಜುನಾಥ್ ಪ್ರತಿಕ್ರಿಯೆ
Last Updated 13 ಆಗಸ್ಟ್ 2022, 2:57 IST
ಅಕ್ಷರ ಗಾತ್ರ

ಕಡೂರು: ತಾಲ್ಲೂಕಿನ ಜೀವನಾಡಿ ಮದಗದ ಕೆರೆಯಲ್ಲಿ ಬಿರುಕು ಉಂಟಾ ಗಿದೆ ಎಂಬ ವಿಡಿಯೊವೊಂದು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳ ತಂಡ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮಲೆನಾಡು‌ ಗಿರಿಶ್ರೇಣಿಗಳಲ್ಲಿ ವ್ಯಾಪಕವಾಗಿ‌ ಮಳೆಯಾಗುತ್ತಿರುವುದರಿಂದ ಮದಗದ ಕೆರೆಗೆ ನೀರಿನ ಹರಿವು ಹೆಚ್ಚಾಗಿದೆ. ಕೆರೆ ಭರ್ತಿಯಾಗಿ ಕೋಡಿ ಹರಿಯುತ್ತಿರುವ ಜಾಗದಲ್ಲಿ ಇದ್ದ ಹಳೆಯ ಮರವೊಂದು ನೀರಿನ ರಭಸಕ್ಕೆ ಬಿದ್ದು ಹೋಗಿ, ಅಲ್ಲಿ ನೀರಿನ ಸೆಳೆತಕ್ಕೆ ಮಣ್ಣು ಕುಸಿದಿದೆ. ಈ ಹಿನ್ನೆಲೆಯಲ್ಲಿ ಎಂಜಿನಿಯರ್‌ಗಳ ತಂಡ ಶುಕ್ರವಾರ ಕೆರೆಗೆ ಭೇಟಿ ನೀಡಿ ಪರಿಶೀಲಿಸಿತು.

ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಸಿ. ಮಂಜುನಾಥ್ ಪ್ರತಿಕ್ರಿಯಿಸಿ, ‘ಕೆರೆಯು ಕೋಡಿ ಹರಿಯುವ ಪ್ರದೇಶದಲ್ಲಿ ಯಾವುದೇ ಬಿರುಕು ಉಂಟಾಗಿಲ್ಲ. ನೀರಿನ ರಭಸ ಹೆಚ್ಚಾದ ಹಿನ್ನೆಲೆಯಲ್ಲಿ ಕೆರೆಯ ಕೋಡಿ ಬಳಿ ಮಣ್ಣು ಅಲ್ಪಪ್ರಮಾಣದಲ್ಲಿ ಕುಸಿದಿದೆ. ಅದರೆ ಏರಿ ಸುಭದ್ರವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT